newsics.com
ಕೆಲವರು ತಮ್ಮ ಬಿಡುವಿನ ಸಮಯ ದಲ್ಲಿ ಪುಸ್ತಕ ಓದುವುದು, ರೀಲ್ಸ್ ಮಾಡುವುದು, ಸಿನಿಮಾ ನೋಡುವುದು ಹೀಗೆ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಈ ಹುಡುಗಿ ವಿಚಿತ್ರ ಆದರೆ ಆಕರ್ಷಕ ಹವ್ಯಾಸ ಹೊಂದಿದ್ದಾಳೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತನ್ನ ವಿಚಿತ್ರ ಹವ್ಯಾಸಕ್ಕಾಗಿ ವೈರಲ್ ಆಗಿದ್ದಾಳೆ.
ಈ ಹುಡುಗಿ ಸೊಳ್ಳೆಗಳನ್ನು ಕೊಂದು ಸಂಗ್ರಹಿಸಿ ಹೆಸರು, ಸಮಯ ಮತ್ತು ಸಾವಿನ ಸ್ಥಳದ ಮೂಲಕ ವರ್ಗೀಕರಿಸಿದ್ದಾಳೆ.
ಈ ವಿಡಿಯೋವನ್ನು akansha rawat ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.ಈಗಾಗಲೇ ಇದು ಐದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಯುವತಿಯೂ ಸತ್ತ ಸೊಳ್ಳೆಗಳು ಇದ್ದ ಕಾಗದದ ಹಾಳೆಯನ್ನು ತೋರಿಸಿದ್ದಾಳೆ. ಈ ಹಾಳೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸತ್ತ ಸೊಳ್ಳೆಯನ್ನು ಅಂಟಿಸಿರುವುದನ್ನು ಕಾಣಬಹುದು. ಅದಲ್ಲದೇ ಈ ಸೊಳ್ಳೆಗಳಿಗೆ ಸಿಗ್ಮಾ ಬೋಯಿ, ರಮೇಶ್, ಬಿಟ್ಟು, ಚೋಟು, ಸುರೇಶ್, ಟಿಂಕು ಹೀಗೆ ನಾನಾ ಹೆಸರನ್ನು ಬರೆದಿದ್ದಾಳೆ. ಅಷ್ಟೇ ಅಲ್ಲದೇ ಸೊಳ್ಳೆ ಸತ್ತ ಸಮಯ ಹಾಗೂ ಸ್ಥಳವನ್ನು ಉಲ್ಲೇಖಿಸಿದನ್ನು ನೋಡಬಹುದು.
https://www.instagram.com/reel/DIRX56WzDLP/?igsh=c21scWc1ZGh6Ync2
https://www.newsics.com/2025/04/15/its-okay-to-be-bored-just-laugh-a-little/