Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ನಾಸಾದಲ್ಲಿ ಭಾರತೀಯ ಮೂಲದ ನೀಲಾ ರಾಜೇಂದ್ರ ವಜಾ; ಡೊನಾಲ್ಡ್ ಟ್ರಂಪ್‌ ಆದೇಶದಲ್ಲೇನಿದೆ?
ವಿದೇಶ

ನಾಸಾದಲ್ಲಿ ಭಾರತೀಯ ಮೂಲದ ನೀಲಾ ರಾಜೇಂದ್ರ ವಜಾ; ಡೊನಾಲ್ಡ್ ಟ್ರಂಪ್‌ ಆದೇಶದಲ್ಲೇನಿದೆ?

Share
1 Min Read
SHARE

newsics.com

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ವಿಭಾಗವೊಂದರ ಮುಖ್ಯಸ್ಥರಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ.

ನಾಸಾದ ಡಿಇಐ ಕಾರ್ಯಕ್ರಮವನ್ನೇ ರದ್ದುಪಡಿಸಿರುವ ಡೊನಾಲ್ಡ್‌ ಟ್ರಂಪ್‌, “ಇದು ಆಡಳಿತಕ್ಕೆ ಅನಗತ್ಯ ಹೊರೆ” ಎಂದು ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ನೀಲಾ ರಾಜೇಂದ್ರ ಅವರನ್ನು ಉಳಿಸಿಕೊಳ್ಳಲು ನಾಸಾ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು, ಅಧ್ಯಕ್ಷ ಆದೇಶವನ್ನು ಪಾಲಿಸಲಾಗಿದೆ

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯು ತನ್ನ ಉನ್ನತ ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ (DEI) ಅಧಿಕಾರಿ ನೀಲಾ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶ ಹಿನ್ನೆಲೆ ವಜಾಗೊಳಿಸಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಕಳೆದ ವಾರ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಉದ್ಯೋಗಿಗಳಿಗೆ ಇಮೇಲ್ ಮೂಲಕ, ನೀಲಾ ರಾಜೇಂದ್ರ ಅವರನ್ನು ಕೆಲಸದಿಂದ ವಜಾಗೊಳಿಸಿದ ವಿಷಯವನ್ನು ತಿಳಿಸಲಾಗಿದೆ. “ನೀಲಾ ರಾಜೇಂದ್ರ ಇನ್ನು ಮುಂದೆ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡುವುದಿಲ್ಲ” ಎಂದು ನಾಸಾ ಮಾಹಿತಿ ನೀಡಿದೆ.
ಹಲವು ವರ್ಷಗಳಿಂದ ನೀಲಾ ರಾಜೇಂದ್ರ ನಾಸಾದಲ್ಲಿ ಹಿರಿಯ ಹುದ್ದೆಯನ್ನು ಅಲಂಕರಿಸಿದ್ದರು. ಅವರು ಅಲ್ಲಿದ್ದಾಗ ಹಲವು ಉನ್ನತ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ನಾಸಾದಲ್ಲಿ ವೈವಿಧ್ಯತೆಯನ್ನು ತರಲು ‘ಸ್ಪೇಸ್ ವರ್ಕ್‌ಫೋರ್ಸ್ 2030’ ಎಂಬ ಭವಿಷ್ಯದ ಭರವಸೆಯ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯು ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳುವುದು ಅವರ ಪ್ರಮುಖ ಗುರಿಯಾಗಿತ್ತು.

ತನ್ನ ವೈವಿಧ್ಯತೆ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಇತರ ಫೆಡರಲ್ ಸರ್ಕಾರಿ ಸಂಸ್ಥೆಗಳ ಸಾಲಿಗೆ ಈಗ ನಾಸಾ ಸೇರಿದೆ.

ಡೊನಾಲ್ಡ್ ಟ್ರಂಪ್ ಅವರ ಆದೇಶದ ಪ್ರಕಾರ, “ಇಂತಹ ಕಾರ್ಯಕ್ರಮಗಳು ಅಮೆರಿಕನ್ನರನ್ನು ಜನಾಂಗ, ಬಣ್ಣ ಮತ್ತು ಲಿಂಗದ ಆಧಾರದ ಮೇಲೆ ವಿಂಗಡಿಸಿವೆ. ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿವೆ ಮತ್ತು ಮಾನಹಾನಿಕರ ತಾರತಮ್ಯಕ್ಕೆ ಕಾರಣವಾಗಿವೆ”. ಟ್ರಂಪ್‌ ಆದೇಶದ ಹಿನ್ನೆಲೆಯಲ್ಲಿ ನಾಸಾ ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳು ತಮ್ಮ ಡಿಇಐ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

https://www.newsics.com/2025/04/15/akai-who-learned-kannada-searched-google-for-his-future-wife/

TAGGED:#Indian #NeelaRajendra #fired #NASA #Donald Trump
Share This Article
Facebook Twitter Copy Link Print
Previous Article Court order ಸಿಎಂಗೆ ಬಿಗ್‌ ಶಾಕ್: ಮುಡಾ ತನಿಖೆ ಮುಂದುವರಿಸಲು ಲೋಕಾಗೆ ಕೋರ್ಟ್ ಸೂಚನೆ
Next Article Good Bad Ugly ಗುಡ್ ಬ್ಯಾಡ್ ಅಗ್ಲಿ ಚಿತ್ರ ತಂಡಕ್ಕೆ ₹5 ಕೋಟಿ ಡಿಮ್ಯಾಂಡ್ ಇಟ್ಟ ಸಂಗೀತ ನಿರ್ದೇಶಕ -ಕಾರಣವೇನು?

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?