newsics.com
ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ ವೈಷ್ಣವಿ ಗೌಡ ಅವರು ಅಕಾಯ್ ಎನ್ನುವವರ ಜೊತೆ ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ. ವೈಷ್ಣವಿ ಗೌಡ ಮತ್ತು ಅಕಾಯ್ ನಿಶ್ಚಿತಾರ್ಥದ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವೈಷ್ಣವಿ ಪತಿ ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಾರೆ. ಅನುಕೂಲ್ಗೆ ಕನ್ನಡ ಬರೋದಿಲ್ಲ. ಆದರೆ ವೈಷ್ಣವಿಗಾಗಿ ಅವರೇ ಗೂಗಲ್ನಲ್ಲಿ ಹುಡುಕಿ ಕನ್ನಡ ಕಲಿತಿದ್ದಾರೆ. ಈಗ ವೈಷ್ಣವಿ ಅವರೇ ವಿಡಿಯೋ ಹಂಚಿಕೊಂಡು ಹುಡುಗನ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ವೈಷ್ಣವಿ ಗೌಡ ಬಳಿಕ ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು. ಬಳಿಕ ಕೊಂಚ ವಿರಾಮ ಪಡೆದಿದ್ದರು. ಆ ಬಳಿಕ ಜೀ ಕನ್ನಡ ವಾಹಿನಿಯ ‘ಸೀತಾರಾಮ’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು.
‘43 ದಿನ ಹೊರಗಡೆ ಇದ್ರಿ, ಅಂದಾಜು ಎಷ್ಟು ಪ್ರಪೋಸಲ್ ಬಂದಿರಬಹುದು’ ಎಂದು ವೇದಿಕೆ ಮೇಲೆ ಸುದೀಪ್ ಕೇಳಿದ್ದರು. ಆಗ ವೈಷ್ಣವಿ, ‘200ರಿಂದ 300 ಬಂದಿರಬಹುದು. ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ ಎಂದಿದ್ದರು ವೈಷ್ಣವಿ.
‘ನಾನು ಯಾವಾಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ’ ಎಂದಿದ್ದರು. ಈಗ ಅಕಾಯ್ ವೈಬ್ಗೆ ವೈಷ್ಣವಿ ಕನೆಕ್ಟ್ ಆಗಿದ್ದಾರೆ ಎಂದು ವೈಷ್ಣವಿ ಹೇಳಿದ್ದರು