newsics.com
ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧ ತೀವ್ರಗೊಂಡಿದೆ. ಚೀನಾದ ಈ ಪ್ರತಿರೋಧ ಕ್ರಮ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.
ಇದೀಗ ಟ್ರಂಪ್ ಆಡಳಿತವು ತನ್ನ ಪ್ರತಿ ಸುಂಕಗಳಿಂದ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ವಿನಾಯಿತಿ ನೀಡಿದೆ.
ಅಮೆರಿಕದ ಸುಂಕ ಮತ್ತು ಗಡಿ ಸಂರಕ್ಷಣಾ ಕಚೇರಿ ಶುಕ್ರವಾರ ತಡರಾತ್ರಿ ಹೊರಡಿಸಿದ ನೋಟಿಸ್ ನಲ್ಲಿ, ಚೀನಾದಿಂದ ಅಮೆರಿಕಕ್ಕೆ ಬರುವ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಸರಕುಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಸೆಮಿಕಂಡಕ್ಟರ್ ಗಳಿಗೂ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅಮೆರಿಕದೊಂದಿಗೆ ಹೆಚ್ಚಿನ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲಿನ ಶೇ. 10 ರಷ್ಟು ಸುಂಕ ಹಾಗೂ ಚೀನಾದ ಮೇಲಿನ ಶೇ. 125 ರಷ್ಟು ಸುಂಕದಿಂದ ಸೆಮಿಕಂಡಕ್ಟರ್ ಗೆ ವಿನಾಯಿತಿ ನೀಡಲಾಗಿದೆ.
https://www.newsics.com/2025/04/13/man-who-threw-chapati-on-the-road-for-a-cow-what-did-the-cm-say/