newsics.com
ದೆಹಲಿ: ಮಾರ್ಗದಲ್ಲಿ ವ್ಯಕ್ತಿಯೊಬ್ಬರು ಗೋವಿಗೆ ತಿನ್ನಿಸಲು ರೊಟ್ಟಿಯನ್ನು ಎಸೆದಿದ್ದಾರೆ. ಇದನ್ನು ಗಮನಿಸಿದ ದೆಹಲಿ ಸಿಎಂ ರೇಖಾ ಗುಪ್ತಾ, ಆ ವ್ಯಕ್ತಿಗೆ ಈ ರೀತಿ ಮಾಡಬೇಡಿ ಬುದ್ಧಿ ಹೇಳಿದ್ದಾರೆ.
ಈ ರೀತಿ ರೊಟ್ಟಿ ಎಸೆಯುವುದರಿಂದ ಗೋವುಗಳು ರಸ್ತೆ ಮಧ್ಯ ಬಂದು ಅಪಘಾತವಗುವ ಸಾಧ್ಯತೆ ಇದೆ. ಇದರಿಂದ ಜನತೆಗೂ ತೊಂದರೆಯಾಗಲಿದೆ. ರೋಟಿ ಕೇವಲ ಆಹಾರವಲ್ಲ, ಅದು ನಮ್ಮ ಸಂಸ್ಕೃತಿ, ನಂಬಿಕೆ, ಗೌರವಗಳ ಚಿಹ್ನೆ ಎಂದು ಹೇಳಿದ್ದಾರೆ.
ಈ ವೀಡಿಯೊವನ್ನು ಗುಪ್ತಾ ಅವರು X ನಲ್ಲಿ ಶೇರ್ ಮಾಡಿದ್ದು, ದೆಹಲಿಯ ಜನರು ‘ರೊಟ್ಟಿ’ ಅಥವಾ ಯಾವುದೇ ಆಹಾರವನ್ನು ರಸ್ತೆಗೆ ಎಸೆಯಬೇಡಿ ಎಂದು ವಿನಂತಿಸಿದ್ದಾರೆ.
“ರಸ್ತೆಗೆ ರೊಟ್ಟಿ ಎಸೆಯುವುದರಿಂದ ಹಸುಗಳು ಮತ್ತು ಇತರ ಪ್ರಾಣಿಗಳು ಅಲ್ಲಿಗೆ ತಿನ್ನಲು ಬರುತ್ತವೆ, ಇದು ಅವರ ಜೀವಕ್ಕೆ ಅಪಾಯವನ್ನುಂಟುಮಾಡುವುದಲ್ಲದೆ, ರಸ್ತೆಯಲ್ಲಿ ನಡೆಯುವ ಜನರು ಮತ್ತು ವಾಹನಗಳ ಸುರಕ್ಷತೆಗೂ ಅಪಾಯವನ್ನುಂಟುಮಾಡುತ್ತದೆ” ಎಂದು ಗುಪ್ತಾ ಹಿಂದಿಯಲ್ಲಿ ಬರೆದಿದ್ದಾರೆ.