newsics.com
ಕಾರವಾರ: ಮನೆಯೊಂದರಲ್ಲಿ 14 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ನಡೆದಿದೆ
ಅರ್ಷದ್ ಖಾನ್ ಎಂಬಾತನ ಮನೆಯಲ್ಲಿ 500 ರೂ. ಮುಖಬೆಲೆಯ 14 ಕೋಟಿ ರೂ.ನಷ್ಟು ನಕಲಿ ನೋಟುಗಳು ಪತ್ತೆಯಾಗಿದೆ.
ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸರು ಅರ್ಷದ್ ಖಾನ್ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ
ಪೊಲೀಸರು ಪರಿಶೀಲನೆ ನಡೆಸಿದಾಗ ಭಾರತೀಯ ರಿಸರ್ವ್ ಬ್ಯಾಂಕ್ ಬರಹ ಇಲ್ಲದ, ಗವರ್ನರ್ ಸಹಿ ಇಲ್ಲದ ನೋಟುಗಳು ಪತ್ತೆಯಾಗಿದೆ.
ಅಲ್ಲದೇ ನೋಟುಗಳ ಮೇಲೆ ʻಮೂವಿ ಶೂಟಿಂಗ್ ಪರ್ಪಸ್ʼ ಎಂದೂ ಸಹ ಬರೆದಿರುವುದು ಬೆಳಕಿಗೆ ಬಂದಿದೆ.ನೋಟಿನ ಸಂಖ್ಯೆಯಲ್ಲಿ ಸೊನ್ನೆ ಅಷ್ಟೇ ನಮೂದು ಮಾಡಲಾಗಿದ್ದು ಯಾವ ಉದ್ದೇಶಕ್ಕಾಗಿ ಈ ನೋಟುಗಳನ್ನು ಬಳಸಲಾಗುತ್ತಿದೆ ಅನ್ನೋದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
COLLAPSE : ನೈಟ್ ಕ್ಲಬ್ ಮೇಲ್ಛಾವಣಿ ಕುಸಿದು 79 ಮಂದಿ ಸಾವು: ನೂರಾರು ಮಂದಿಗೆ ಗಾಯ