Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Lifestyle ರಾತ್ರಿ ವೇಳೆ ಸೊಳ್ಳೆ ಕಾಟವೇ? ಹಾಗಾದ್ರೆ ಈ ರೀತಿ ಮಾಡಿ
ಲೈಫ್‌ಸ್ಟೈಲ್

Lifestyle ರಾತ್ರಿ ವೇಳೆ ಸೊಳ್ಳೆ ಕಾಟವೇ? ಹಾಗಾದ್ರೆ ಈ ರೀತಿ ಮಾಡಿ

Share
2 Min Read
SHARE

newsics.com

ಸಾಮಾನ್ಯವಾಗಿ ಎಲ್ಲ ಋತುಮಾನದಲ್ಲಿ ಎಲ್ಲರನ್ನೂ ಕಾಡುವ ಗಂಭೀರ ಸಮಸ್ಯೆ ಎಂದರೆ ಸೊಳ್ಳೆಯ ಕಾಟ. ಸಂಜೆಯಾದಕ್ಷಣ ಮನೆಗೆ ದಾಳಿ ಇಡುವ ಸೊಳ್ಳೆಗಳು ಯಾವುದೇ ಕಾಯಿಲ್, ಬತ್ತಿ, ಧೂಪಗಳನ್ನು ಹಾಕುವುದು ಸೇರಿದಂತೆ ಯಾವುದೇ ಮಾರ್ಗಕ್ಕೂ ಇವು ಜಗ್ಗುವುದಿಲ್ಲ. ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ.
ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುವ ಸಾಧ್ಯತೆಗಳಿವೆ.

ಬೇಸಿಗೆ ಮತ್ತು ಮಳೆಗಾಲ ಬಂದ್ರೆ ಸಾಕು ಸೊಳ್ಳೆಗಳ ಕಾಟ ಮಿತಿಮೀರುತ್ತೆ. ಸಂಜೆಯಾಗುತ್ತಿದ್ದಂತೆ, ದಾಳಿ ಮಾಡುವ ಸೊಳ್ಳೆಗಳು ಡೆಂಗ್ಯೂ, ಮಲೇರಿಯಾ ಮುಂತಾದ ಅನೇಕ ಅಪಾಯಕಾರಿ ರೋಗಗಳ ವಾಹಕ ಎಂದರೂ ತಪ್ಪಾಗಲ್ಲ.

ಸೊಳ್ಳೆಗಳನ್ನು ಓಡಿಸಲು ಅಥವಾ ಕೊಲ್ಲಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿದೆ. ಇವುಗಳ ಸಹಾಯದಿಂದ ಸೊಳ್ಳೆಗಳನ್ನು ಸುಲಭವಾಗಿ ನಿರ್ಮೂಲನೆ ಮಾಡಬಹುದು. ಆದರೆ ಅವೆಲ್ಲವೂ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಕೆಲವೊಮ್ಮೆ ಇವುಗಳಿಂದ ಹೊರಹೊಮ್ಮುವ ಹೊಗೆ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಆದ್ದರಿಂದ ಕೆಲವು ಸಸ್ಯಗಳ ಬಗ್ಗೆ ಹೇಳಲಿದ್ದೇವೆ. ಅವುಗಳ ಪರಿಮಳ ನಿಮಗೆ ಇಷ್ಟವಾಗಬಹುದು ಆದರೆ ಸೊಳ್ಳೆಗಳಿಗಲ್ಲ

ಕಿತ್ತಳೆ ಮತ್ತು ಹಳದಿ ಬಣ್ಣ ಹೊಂದಿರುವ ಚೆಂಡು ಹೂವು ಕೈದೋಟದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಸೊಳ್ಳೆಗಳು ಮತ್ತು ಇತರ ಹಾರುವ ಕೀಟಗಳನ್ನು ಓಡಿಸಲು ಬೆಸ್ಟ್‌ ಪರಿಹಾರ. ಮನೆಯ ಮುಂದೆ ಇದರ ಗಿಡ ನೆಟ್ಟರೆ ಸಾಕು ಸೊಳ್ಳೆಗಳನ್ನು ಸುಲಭವಾಗಿ ದೂರ ಓಡಿಸಬಹುದು.

ಸೊಳ್ಳೆಗಳನ್ನು ದೂರವಿಡಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನವಾದ ಸೊಳ್ಳೆ ನಿವಾರಕದಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ಇಲ್ಲವೇ ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ, ಅದರ ಸುವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬಹಳಷ್ಟು ಸಹಾಯ ಮಾಡುತ್ತದೆ ಮತ್ತು ಅವು ಸುಲಭವಾಗಿ ಓಡಿಹೋಗುತ್ತವೆ. ಅಲ್ಲದೆ, ಲ್ಯಾವೆಂಡರ್ ಪರಿಮಳವು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಸೊಳ್ಳೆಗಳಿಗೆ ಹಸಿ ಬೆಳ್ಳುಳ್ಳಿಯ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ, ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ, ಸೊಳ್ಳೆಗಳು ಅದರ ಸುತ್ತ ಅಲೆದಾಡುವುದಿಲ್ಲ

ರೋಸ್ಮರಿ ಸಸ್ಯವು ನೈಸರ್ಗಿಕ ಸೊಳ್ಳೆ ನಿವಾರಕ ಎಂದು ಹೇಳಲಾಗುತ್ತದೆ. ಇದು ಸೊಳ್ಳೆಗಳನ್ನು ದೂರವಿಡುತ್ತದೆ. ನೀಲಿ ಹೂವುಗಳನ್ನು ಹೊಂದಿರುವ ಈ ಸುಂದರವಾದ ಸಸ್ಯದ ವಿಶೇಷತೆಯೆಂದರೆ ಅವು ಬೇಸಿಗೆಯಲ್ಲಿ ಹುಲುಸಾಗಿ ಬೆಳೆಯುತ್ತವೆ. ಬೆಳೆಯಲು ತಂಪಾದ ಮತ್ತು ಶುಷ್ಕ ಸ್ಥಳದ ಅಗತ್ಯವಿರುತ್ತದೆ. ಆದ್ದರಿಂದ, ಈ ಸಸ್ಯಗಳು ಸೊಳ್ಳೆಗಳನ್ನು ದೂರವಿಡಲು ನಿಮಗೆ ಸಹಾಯ ಮಾಡಬಹುದು.

ಔಷಧೀಯ ಗುಣಗಳಿಂದ ತುಂಬಿರುವ ತುಳಸಿ ಗಿಡದ ವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಇದಲ್ಲದೆ, ತುಳಸಿಯ ವಾಸನೆಯು ಇತರ ಸಣ್ಣ ಹಾರುವ ಕೀಟಗಳನ್ನು ಸಹ ಓಡಿಸುತ್ತದೆ. ಆದ್ದರಿಂದ, ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ತುಂಬಾ ಪ್ರಯೋಜನಕಾರಿ. ಹಾಗೆಯೇ ತುಳಸಿಯ ಒಂದು ಎಸಳನ್ನು ಇಟ್ಟರೂ ಸಾಕು ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಸೊಳ್ಳೆಯ ಕಾಟ ಇರುವುದಿಲ್ಲ.

Harassment ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್

TAGGED:Are mosquitoes a problem at night?! If soplace this leaf next to your pillow! Then see the miracle!
Share This Article
Facebook Twitter Copy Link Print
Previous Article Harassment ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್
Next Article Fake doctor ಶಸ್ತ್ರಚಿಕಿತ್ಸೆ ಮಾಡಿ 7 ಜನರ ಜೀವ ತೆಗೆದ ನಕಲಿ ವೈದ್ಯ

Popular Posts

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?