newsics.com
ಬೆಂಗಳೂರು: ನಂದಿನಿ ಹಾಲಿನ ದರ ದಿಢೀರ್ ಆಗಿ 4 ರೂಪಾಯಿ ಏರಿಕೆ ಮಾಡಿದ ಬೆನ್ನಲ್ಲೇ ಕೆಲ ಹೋಟೆಲ್ ಗಳಲ್ಲಿ ಕಾಫಿ ಮತ್ತು ಟೀ ದರ ಏರಿಕೆ ಮಾಡಲಾಗಿದೆ.
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ಸಂಪುಟ ಸಭೆಯಲ್ಲಿ 4 ರೂಪಾಯಿ ಏರಿಕೆ ಮಾಡಲಾಗಿತ್ತು.ಇದೀಗ ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ಕಾಫಿ ಮತ್ತು ಚಹಾ ದರವನ್ನು ಏರಿಕೆ ಮಾಡಿವೆ. 3 ರೂಪಾಯಿಯಿಂದ 5 ರೂಪಾಯಿವರೆಗೆ ದರ ಹೆಚ್ಚಳವಾಗಿದೆ.
ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ ನಾಲ್ಕು ರೂಪಾಯಿ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾಫಿ ಮತ್ತು ಚಹಾದ ದರ ಹೆಚ್ಚಳ ಮಾಡಬೇಕಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು
ಇದೀಗ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡದೆ ಏಕಾಏಕಿ ಕಾಫಿ ಹಾಗೂ ಟೀ ಬೆಲೆ ಏರಿಕೆ ಮಾಡಿದ್ದು, ಹೋಟೆಲ್ ಮಾಲೀಕರ ವಿರುದ್ಧ ಗ್ರಾಹಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.