newsics.com
ಮಹಿಳೆಯೊಬ್ಬಳು ತನ್ನ ಪತಿಯನ್ನು ಮನಸೋಇಚ್ಛೆ ಹೊಡೆದಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ.
ಸದ್ಯ ಹೆಂಡತಿ ತನಗೆ ಹೊಡೆದಿದ್ದಾಳೆಂದು ಆರೋಪ ಮಾಡಿರುವ ಪತಿ, ತನ್ನ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
ಹಿಡನ್ ಕ್ಯಾಮೆರಾದ ಮೂಲಕ ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಈ ಘಟನೆ ಮಾರ್ಚ್ 20 ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಲೋಕೇಶ್ ಎಂಬಾತನ ಪತ್ನಿ ಅವನನ್ನು ಹಲವು ಬಾರಿ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡುಬಂದಿದೆ. ಆತ ಕೈ ಮುಗಿದು ಕ್ಷಮೆ ಯಾಚಿಸುತ್ತಿದ್ದರೂ, ಮತ್ತೊಬ್ಬ ಮಹಿಳೆ ತಡೆಯಲು ಪ್ರಯತ್ನಿಸಿದರೂ ಆಕೆ ಕೇಳದೆ, ಲೋಕೇಶ್‌ನ ಕಾಲರ್ ಹಿಡಿದು ಹೊಡೆಯುವುದನ್ನು ಮುಂದುವರಿಸಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿರುವ ಪತಿ, ತನ್ನ ಪತ್ನಿಯಿಂದ ರಕ್ಷಣೆ ಕೋರಿದ್ದಾನೆ. ಪೊಲೀಸ್ ಠಾಣೆಗೆ ಹೋಗಿ ನನಗೆ ರಕ್ಷಣೆ ಕೊಡಿ ಎಂದು ಲೊಕೇಶ್ ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.
Viral video ಕುಂಭಮೇಳದ ಬೆಡಗಿ ಮೋನಾಲಿಸಾ ಕಣ್ಣೀರು, ಯಾಕೆ? ; ವೈರಲ್ ವಿಡಿಯೋ ನೋಡಿ