newsics.com
ಮಹಾ ಕುಂಭ ಮೇಳದ ಬೆಡಗಿ ಮೋನಾಲಿಸಾ, ಕುಟುಂಬ ಸದಸ್ಯರಿಂದ ಸುತ್ತುವರೆದು ದುಃಖಿಸುತ್ತಿರುವ ವಿಡಿಯೋ ವೈರಲ್‌ಆಗಿದೆ. ಮೋನಾಲಿಸಾಗೆ ಸಿನಿಮಾಗಳಲ್ಲಿ ಅವಕಾಶ ನೀಡಲು ಮುಂದಾಗಿದ್ದ ನಿರ್ದೇಶಕ ಸಂಜೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬೆನ್ನಲ್ಲೇ ಈ ವಿಡಿಯೋ ಹೊರಬಿದ್ದಿದೆ.
ವೈರಲ್ ವಿಡಿಯೋದಲ್ಲಿ ಮೋನಾಲಿಸಾ ದುಃಖಿಸುತ್ತಿರುವುದನ್ನು ಕಾಣಬಹುದು. ಆಕೆಯ ಕುಟುಂಬದ ಸದಸ್ಯರು ಆಕೆಯನ್ನು ತಬ್ಬಿಕೊಂಡು ಸಂತೈಸುತ್ತಿದ್ದಾರೆ. ಆಕೆಯ ಕುಟುಂಬದ ಸದಸ್ಯರೊಬ್ಬರು ಆಕೆಯ ಕಣ್ಣೀರನ್ನು ಒರೆಸುತ್ತಿರುವುದು ಸಹ ಕಾಣಬಹುದು. ಆಕೆ ದುಃಖಿಸಲು ನಿಖರವಾದ ಕಾರಣ ತಿಳಿದಿಲ್ಲವಾದರೂ, ಅತ್ಯಾಚಾರ ಪ್ರಕರಣದಲ್ಲಿ ಸಂಜೋಜ್ ಮಿಶ್ರಾ ಬಂಧನಕ್ಕೊಳಗಾದ ಕಾರಣದಿಂದ ಆಕೆ ಕಣ್ಣೀರಿಟ್ಟಿದ್ದಾಳೆ ಎನ್ನಲಾಗಿದೆ.
ಸಮಝೋಜ್ ಮಿಶ್ರಾ ಯುವತಿಯೊಬ್ಬರಿಗೆ ಪಾತ್ರಗಳನ್ನು ನೀಡುವ ಮತ್ತು ಮದುವೆಯಾಗುವ ನೆಪದಲ್ಲಿ ಅನೇಕ ಬಾರಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸೋಮವಾರ ದೆಹಲಿಯಲ್ಲಿ ಮಿಶ್ರಾ ಅವರನ್ನು ಬಂಧಿಸಲಾಗಿದೆ.
https://www.instagram.com/reel/DHtKP5uz7xo/?igsh=OTNkNnYycGV2bjlx