newsics.com
ಬಿಗ್ ಬಾಸ್ ಕನ್ನಡ 7’ರ ಸ್ಪರ್ಧಿ ಶೈನ್ ಶೆಟ್ಟಿ ಅವರಿಗೆ ಬದುಕು ಕೊಟ್ಟ ರೆಸ್ಟೋರೆಂಟ್‌ಗೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಶೈನ್ ಬಹಿರಂಗವಾಗಿ ಪತ್ರ ಬರೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ 7’ರ ಸ್ಪರ್ಧಿ ಶೈನ್ ಶೆಟ್ಟಿ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು.
ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರಿಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತೆ ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಗಿಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್‌ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಶೈನ್ ಪತ್ರ ಬರೆದಿದ್ದಾರೆ.
ಇನ್ನೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ಬಳಿಕ ಚಿತ್ರರಂಗದಲ್ಲಿ ಹಿನ್ನೆಡೆಯಾದಾಗ ‘ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದರು. ಇದೀಗ ಬದುಕು ಕೊಟ್ಟ ಹೋಟೆಲ್ ಉದ್ಯಮಕ್ಕೆ ಅವರು ಗುಡ್ ಬೈ ಹೇಳಿದ್ದಾರೆ.
https://www.instagram.com/p/DH7di5JT2Hi/?igsh=Y21kbXRoemlsODQw
https://www.newsics.com/2025/04/02/waqf-amendment-bill-introduced-in-lok-sabha/