newsics.com
ನವದೆಹಲಿ : ಲೋಕಸಭೆಯಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು.ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಿದರು.
1995ರಲ್ಲಿ ಈ ಮಸೂದೆಯನ್ನು ಪರಿಚಯಿಸಿದಾಗ ಯಾರು ವಿರೋಧಿಸಿರಲಿಲ್ಲ. ಈ ಹಿಂದೆಯೂ ಹಲವು ಬಾರಿ ತಿದ್ದುಪಡಿಯಾಗಿದ್ದು ವಿರೋಧಗಳು ಬಂದಿರಲಿಲ್ಲ . ರಾಜಕೀಯ ಉದ್ದೇಶದಿಂದ ಮಸೂದೆ ವಿರೋಧಿಸುತ್ತಿದ್ದಾರೆಂದು ಹೇಳಿದರು.
ಈ ವಿಚಾರವಾಗಿ 25 ರಾಜ್ಯಗಳ ವಕ್ಫ್ ಬೋರ್ಡ್ಗಳ ಅಭಿಪ್ರಾಯ ಕೇಳಲಾಗಿದೆ. ಮಸೂದೆ ಕುರಿತು 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಈ ಮಸೂದೆ ಬಗ್ಗೆ ನಡೆದಷ್ಟು ಚರ್ಚೆ ಯಾವುದರಲ್ಲಿಯೂ ನಡೆದಿಲ್ಲ. ಸಂಸದೀಯ ಜಂಟಿ ಸಮಿತಿಯಲ್ಲೂ ವಿಧೇಯಕದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ ಎಂದು ತಿಳಿಸಿದರು.
https://www.newsics.com/2025/04/02/another-trouble-for-ranya-rao/