newsics.com
ಚಿಕ್ಕಮಗಳೂರು: ನಾಗರ ಹಾವೊಂದು ಹೋಟೆಲ್ ನುಗ್ಗಿ 10 ಮೊಟ್ಟೆ ನುಂಗಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಕೊಟ್ಟಿಗೆಹಾರದಲ್ಲಿರುವ ಉಡುಪಿ ವೈಭವ್ ಹೋಟೆಲ್ ನಲ್ಲಿ ನಡೆದಿದೆ
ಹೋಟೆಲ್ಗೆ ನುಗ್ಗಿದ ಹಾವು, 10 ಕೋಳಿ ಮೊಟ್ಟೆಗಳನ್ನು ನುಂಗಿ ಹೊಟ್ಟೆ ತುಂಬಿ ಮುಂದೆಯೂ ಹಿಂದೆಯೂ ಹೋಗಲು ಸಾಧ್ಯವಾಗದೆ ನರಳಾಡುತ್ತಿತ್ತು. ಇದನ್ನು ಗಮನಿಸಿದ ಹೋಟೆಲ್ ಮಾಲೀಕ ಉರಗತಜ್ಞ ಆರಿಫ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರಹೇಳಿದ್ದಾರೆ.
ಆರೀಫ್ ಬಾಲ ಹಿಡಿದು ಮೇಲೆತ್ತುತ್ತಿದ್ದಂತೆ 10 ಮೊಟ್ಟೆಯನ್ನು ಹಾವು ಹೊರಹಾಕಿದೆ. ಸೆರೆಹಿಡಿದ ನಾಗರನಿಗೆ ಹೋಟೆಲ್ ಮಾಲೀಕ ಪೂಜೆ ಸಲ್ಲಿಸಿದ್ದಾರೆ.
https://www.newsics.com/2025/04/01/wow-gold-prices-are-rising-again/