newsics.com
ಅಮೆರಿಕ : ಮಹಿಳೆಯೊಬ್ಬಳು ಪೂರ್ಣ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ಓಡಾಡಿ ಅಸಭ್ಯ ವರ್ತನೆಯನ್ನು ತೋರಿದ್ದಾಳೆ. ಈ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿರುವ ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆತ್ತಲಾಗಿ ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ, ಎಲ್ಲರ ಮೇಲೆ ನೀರೆರಚಿದ್ದಾಳೆ. ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್ ಸಿಬ್ಬಂದಿಗೆ ಕಚ್ಚಿ ರಾದ್ಧಾಂತ ಸೃಷ್ಟಿಸಿದ್ದಾಳೆ.
Kanwaljit Arora ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯಹಂಚಿಕೊಳ್ಳಲಾಗಿದೆ. ಮಹಿಳೆಯೊಬ್ಬಳು ಬೆತ್ತಾಲಾಗಿ ನಾನು ಶುಕ್ರ ದೇವತೆಯೆಂದು ಜೋರಾಗಿ ಚೀರಿ ಹೇಳುತ್ತಾ, ನೀರೆರಚುತ್ತಾ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು.