newsics.com
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿಸಲಾದ ನಟಿ ರನ್ಯಾ ರಾವ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜಾಮೀನು ಅರ್ಜಿ ಕೋರಿ ನಟಿ ರನ್ಯಾ ಪರ ವಕೀಲರು, ನಗರದ 64ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್ ವಜಾ ಮಾಡಿ ಆದೇಶ ನೀಡಿದೆ. ಮತ್ತೆ ರನ್ಯಾ ಜೈಲಿನ ವಾಸವಾಗಿವೆ.
ರನ್ಯಾ ರಾವ್ ಕೇಸ್ನಲ್ಲಿ ಅಂತರರಾಷ್ಟ್ರೀಯ ಸಂಪರ್ಕ ಇದ್ದು. ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ. ಒಂದು ವೇಳೆ ಜಾಮೀನು ನೀಡಿದರೆ
ಸಾಕ್ಷಿ ನಾಶ ಹಾಗೂ ಮಿಸ್ ಲೀಡ್ ಮಾಡಬಹುದು ಎಂಬ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾ ಮಾಡಿದೆ.