newsics.com
ಮುಂಬೈ : ಹಿಂದಿಯಲ್ಲಿ ಮಾತ್ರವಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸಲ್ಲಿಗೆ ಅಪಾರ ಫ್ಯಾನ್ ಫಾಲೋವರ್ಸ್ ಇದ್ದಾರೆ. ಇನ್ನೂ ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಸಲ್ಮಾನ್ ಇದೀಗ ಮಾರ್ಚ್ 30 ರಂದು ಸಿಕಂದರ್ ಚಿತ್ರದಲ್ಲಿ ಬಿಡುಗಡೆಯಾಗಲಿದೆ.
ಈಗ ಸಲ್ಮಾನ್ ಅವರು ಧರಿಸಿದ್ದ ಸ್ಪೆಷಲ್ ಎಡಷಿನ್ ರಾಮಜನ್ಮಭೂಮಿ ವಾಚ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಸಲ್ಮಾನ್ ನೀಲಿ ಬಣ್ಣದ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ದುಬಾರಿ ಬೆಲೆಯ ತಮ್ಮ ವಿಶೇಷ ಆವೃತ್ತಿಯ ರಾಮ ಜನ್ಮಭೂಮಿ ವಾಚ್ ಪ್ರದರ್ಶನ ಮಾಡುತ್ತಿರುವ ಹಲವು ಫೋಟೋ ಸಿರೀಸ್ ಹಂಚಿಕೊಂಡಿದ್ದಾರೆ. ಅದರೊಂದಿಗೆ ಮಾರ್ಚ್ 30 ರಂದು ಚಿತ್ರ ಮಂದಿರಗಳಲ್ಲಿ ಭೇಟಿಯಾಗೋಣ ಎಂದು ಅವರು ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಧರಿಸಿದ ಈ ವಿಶೇಷ ಕೈಗಡಿಯಾರವು ಎಥೋಸ್ ಮತ್ತು ಜಾಕೋಬ್ & ಕಂಪನಿಯ ಸಹಯೋಗದಿಂದ ಸಿದ್ಧವಾಗಿದೆ.
ಈ.2024 ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರದ ಸಮಾರಂಭವನ್ನು ಆಚರಿಸಲು ಈ ವಿಶೇಷ ಎಡಿಷನ್‌ನ ಗಡಿಯಾರವನ್ನು ಹೊರತರಲಾಗಿತ್ತು. ವಾಚ್ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ರಾಮ ಮಂದಿರದ ವಿವರವಾದ ಕೆತ್ತನೆಗಳನ್ನು ಮತ್ತು ರಾಮ ಮತ್ತು ಹನುಮಂತನ ಚಿತ್ರಣಗಳನ್ನು ಒಳಗೊಂಡಿದೆ. ಪಟ್ಟಿಯನ್ನು ಕೇಸರಿ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ, ಅದರ ಆಳವಾದ ಆಧ್ಯಾತ್ಮಿಕ ಸಂಕೇತಕ್ಕಾಗಿ ಈ ಬಣ್ಣವನ್ನು ಆಯ್ಕೆ ಮಾಡಲಾಗಿದೆ. ಈ ಸ್ಪೆಷಲ್ ಎಡಿಷನ್ ವಾಷ್‌ನ ಬೆಲೆ 34 ಲಕ್ಷ ರೂಪಾಯಿ ಆಗಿದೆ.
https://www.instagram.com/p/DHry7a7oU0L/?igsh=eHJzMTA2MHgydW03