newsics.com
ಬೆಳಗಾವಿ: ಎಂಬಿಎ ಪದವೀಧರೆ ನನ್ನ ಸಾವಿಗೆ ನಾನೇ ಕಾರಣ. ಮತ್ತೆ ಹುಟ್ಟಿ ಬರುತ್ತೇನೆಂದು ಗೋಡೆ ಮೇಲೆ ಬರೆದು ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಜಾಹ್ನವಿ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿ.
ನನ್ನ ಸಾವಿಗೆ ನಾನೇ ಕಾರಣ, ನನ್ನ ಮೇಲೆ ಯಾರೂ ವಿಶ್ವಾಸವಿಡುತ್ತಿಲ್ಲ. ನನಗೆ ಯಾರೂ ಸ್ನೇಹಿತರು ಇಲ್ಲ, ಅಪ್ಪ ಅಮ್ಮ ಕೂಡ ನಂಬುತ್ತಿಲ್ಲ. ಪೋಷಕರು ನನ್ನ ಮಾತಿಗೆ ಸ್ಪಂದಿಸುತ್ತಿಲ್ಲ, ಕಾಳಜಿ ವಹಿಸುತ್ತಿಲ್ಲ. ಮತ್ತೆ ಹುಟ್ಟಿ ಬರುತ್ತೇನೆ ಎಂದು ಗೋಡೆ ಮೇಲೆ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪೋಷಕರು ಹಾಸನದಲ್ಲಿ ಕೆಲಸ ಮಾಡುತ್ತಿದ್ದರೆ, ಜಾಹ್ನವಿ ಓದಲು ಬೆಳಗಾವಿಯಲ್ಲಿ ಚಿಕ್ಕಪ್ಪನ ಮನೆ ಮೇಲೆ ರೂಮ್ ಮಾಡಿಕೊಂಡಿದ್ದಳು. ಆದ್ರೆ, ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. , ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.