newsics.com
ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ‘ರೀಲ್ಸ್’ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕಿರುತೆರೆ ನಟರಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದರು.
ಪೊಲೀಸರು ರೀಲ್ಸ್‌ನಲ್ಲಿ ಬಳಸಿದ್ದ ಲಾಂಗ್ ಜಪ್ತಿ ಮಾಡಿದ್ದರು. ಇದೀಗ ಆ ಲಾಂಗ್ ಮತ್ತು ಈ ಲಾಂಗ್, ಆರೋಪಿಗಳ ನಡೆ ಬಗ್ಗೆಯೂ ಅನುಮಾನ ಹುಟ್ಟಿದೆ.
ಹೀಗಾಗಿ ಪೊಲೀಸರು ತಜ್ಞರನ್ನ ಕರೆಸಿ ವೆಪನ್ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.
ಆರೋಪಿಗಳು ಅಸಲಿ ಲಾಂಗ್ ಅಕ್ಷಯ್ ಸ್ಟುಡಿಯೋಸ್‌ನಲ್ಲಿ ಇದೆ ಎಂದಿದ್ದಾರೆ. ಹೀಗಾಗಿ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ತನಿಖೆಯಲ್ಲಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನದ ಹಿನ್ನೆಲೆಯಲ್ಲಿ ರಜತ್, ವಿನಯ್ ಇಬ್ಬರನ್ನು ಮತ್ತೆ ಪೊಲೀಸರು ಬಂಧನ ಮಾಡಿದ್ದಾರೆ.