newsics.com
ಪದ್ಮಶ್ರೀ ಪುರಸ್ಕೃತ ಹಾಸ್ಯ ನಟ ಬ್ರಹ್ಮಾನಂದಂ ಎಲ್ಲರಿಗೂ ಚಿರಪರಿಚಿತರೆ. ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೆರೆ ಮೇಲೆ ಎಲ್ಲರನ್ನೂ ನಗಿಸುತ್ತಾರೆ. ಬ್ರಹ್ಮಾನಂದಂ ಅವರು ಕೇವಲ ನಟನಲ್ಲದೆ, ಅದ್ಭುತ ಚಿತ್ರ ಕಲಾವಿದ ಕೂಡ.
ಟಾಲಿವುಡ್‌ನಲ್ಲಿ ಹಾಸ್ಯದ ರಾಜ ಎಂದು ಕರೆಯಲ್ಪಡುವ ಹಿರಿಯ ತೆಲುಗು ನಟ ಬ್ರಹ್ಮಾನಂದಂ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟರಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಬ್ರಹ್ಮಾನಂದಂ ಅವರು ವೃತ್ತಿಜೀವನದಲ್ಲಿ ಸುಮಾರು ₹500 ಕೋಟಿಗೂ ಹೆಚ್ಚು ಆಸ್ತಿಯನ್ನು ಸಂಪಾದಿಸಿದ್ದಾರೆ. ಇದು ಭಾರತದ ಸ್ಟಾರ್ ನಟರಾದ ರಣಬೀರ್ ಕಪೂರ್ (₹350 ಕೋಟಿ), ಪ್ರಭಾಸ್ (₹ 300 ಕೋಟಿ) ಮತ್ತು ರಜನಿಕಾಂತ್ (₹400 ಕೋಟಿ) ಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ ಹಾಸ್ಯನಟ ಬ್ರಹ್ಮಾನಂದಂ.
ಬ್ರಹ್ಮಾನಂದಂ ಅವರು ಮೂಲತಃ ಆಂಧ್ರಪ್ರದೇಶದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 80ರ ದಶಕದಲ್ಲಿ ತಮ್ಮ ಮಿಮಿಕ್ರಿ ಕೌಶಲ್ಯಕ್ಕೆ ಹೆಸರುವಾಸಿಯಾದ ರಂಗಭೂಮಿ ಕಲಾವಿದರಾಗಿ ತಮ್ಮ ಶೋಬಿಜ್ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇದು 1985ರಲ್ಲಿ ಟಿವಿಯಲ್ಲಿ ಪಾದಾರ್ಪಣೆ ಮಾಡಿದ್ರು. 1987ರಲ್ಲಿ ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು.