newsics.com
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾದ ನಟಿ ರನ್ಯಾ ರಾವ್, ಬಂಗಾರ ಖರೀದಿಗೆ ಹವಾಲಾ ಮಾರ್ಗಗಳ ಮೂಲಕ ದುಬೈಗೆ ಹಣ ವರ್ಗಾಯಿಸಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಕೋರ್ಟ್ ಗೆ ತಿಳಿಸಿದ್ದಾರೆ.
ರನ್ಯಾ ಜಾಮೀನು ಅರ್ಜಿಯ ವಿಚಾರಣೆ 64ನೇ ಸಿಸಿಎಚ್ ಸೆಷನ್ಸ್ ಕೋರ್ಟ್ನಲ್ಲಿ ಮಂಗಳವಾರ (ಮಾರ್ಚ್25) ನಡೆದಿದ್ದು, ತೀರ್ಪನ್ನು 27ಕ್ಕೆ ಮುಂದೂಡಲಾಗಿದೆ.
ಇಂದು ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧಿಸಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಕಂದಾಯ ಗುಪ್ತಚರ ನಿರ್ದೇಶನಾಲಯ ಪರ ವಕೀಲ ಮಧು ರಾವ್ ವಾದವನ್ನು ಮಂಡಿಸಿದ್ದಾರೆ.