ಮುಂಬೈ: ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಈ ಬಾರಿ ಐಪಿಎಲ್ ಪಂದ್ಯ ಆಡುತ್ತಿಲ್ಲ. ಆದರೆ 18ನೇ ಸೀಸನ್ ಐಪಿಎಲ್ ಆರಂಭವಾದ ಮೊದಲ ದಿನವೇ ವಾರ್ನರ್ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.ಹೌದು, ಏರ್ ಇಂಡಿಯಾ ವಿಮಾನದಿಂದ ಅನಾನುಕೂಲ
ಉಂಟುಮಾಡಿದೆ. ನಾನು ವಿಮಾನ ಹತ್ತಿಯಾಗಿದ್ದು, ಆದರೆ ವಿಮಾನದಲ್ಲಿ ಪೈಲಟ್ ಗಳಿಲ್ಲ ಎಂದು ಏರ್ ಇಂಡಿಯಾ ವಿರುದ್ಧ ಆಸೀಸ್ ಕ್ರಿಕೆಟಿಗೆ ಡೇವಿಡ್ ವಾರ್ನರ್ ಏರ್ ಇಂಡಿಯಾ ದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“@airindia ನಾವು ಪೈಲಟ್ಗಳಿಲ್ಲದೆ ವಿಮಾನ ಹತ್ತಿದ್ದೇವೆ. ಗಂಟೆಗಟ್ಟಲೆ ವಿಮಾನದಲ್ಲಿ ಕಾಯುತ್ತಿದ್ದೇವೆ. ನಿಮ್ಮ ವಿಮಾನಕ್ಕೆ ಪೈಲಟ್ಗಳಿಲ್ಲ ಎಂದು ತಿಳಿದಿದ್ದರೂ ನೀವು ಪ್ರಯಾಣಿಕರನ್ನು ಏಕೆ ಹತ್ತಿಸುತ್ತೀರಿ?” ಡೇವಿಡ್ ವಾರ್ನರ್ X ನಲ್ಲಿ ಟ್ವೀಟ್ ಮಾಡಿದ್ದಾರೆ.https://x.com/davidwarner31/status/1903473344164561291?ref_src=twsrc%5Etfw%7Ctwcamp%5Etweetembed%7Ctwterm%5E1903473344164561291%7Ctwgr%5E9590045d74be3cffbe3ff47d2cb8ef2672e74d6b%7Ctwcon%5Es1_c10&ref_url=https%3A%2F%2Fwww.udayavani.com%2Fnews-section%2Fsports-news%2Fsitting-in-the-plane-but-the-pilot-david-warner-sparks-against-air-india