newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ಏಕಾದಶಿ
10-03-2025, ಸೋಮವಾರ
# ಅಮಲಕಿ ಏಕಾದಶಿ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 10/03/2025
ತಿಂಗಳು – ಮಾರ್ಚ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಏಕಾದಶಿ 07:44:05
ಪಕ್ಷ – ಶುಕ್ಲ
ನಕ್ಷತ್ರ – ಪುಷ್ಯ 24:50:19*
ಯೋಗ – ಶೋಭನ 13:55:19
ಕರಣ – ವಿಷ್ಟಿ (ಭದ್ರ) 07:44:05
ಕರಣ – ಭವ 19:55:05
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ – ಕರ್ಕಾಟಕ
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ – 06:31:17
ಸೂರ್ಯಾಸ್ತ – 18:28:29
ಹಗಲಿನ ಅವಧಿ – 11:57:11
ರಾತ್ರಿಯ ಅವಧಿ – 12:02:11
ಚಂದ್ರೋದಯ – 15:21:18
ಚಂದ್ರಾಸ್ತ – 28:29:30*
ರಾಹು ಕಾಲ 08:01 – 09:31 ಅಶುಭ
ಯಮಘಂಡ ಕಾಲ 11:00 – 12:30 ಅಶುಭ
ಗುಳಿಕ ಕಾಲ 13:59 – 15:29
ಅಭಿಜಿತ್ 12:06 – 12:54 ಶುಭ
ದುರ್ಮುಹೂರ್ತ 12:54 – 13:42 ಅಶುಭ
ದುರ್ಮುಹೂರ್ತ 15:17 – 16:05 ಅಶುಭ
—
ಇಂದಿನ ಮಾತು
ಮನುಷ್ಯ ಒಂಟಿಯಾಗಿ ಹುಟ್ಟಿ, ಒಂಟಿಯಾಗಿಯೇ ಸಾಯುತ್ತಾನೆ. ಅವನು ಮಾಡುವ ಕರ್ಮಗಳ ಆಧಾರದ ಮೇಲೆ ಆತ ಸುಖ-ದುಃಖಗಳನ್ನು ಅನುಭವಿಸುತ್ತಾನೆ.
– ಚಾಣಕ್ಯ
—
ಇಂದಿನ ಸುಭಾಷಿತ
ಸುಖಸ್ಯ ದುಃಖಸ್ಯ ನ ಕೋsಪಿ ದಾತಾ ಪರೋ ದದಾತೀತಿ ಕುಬುದ್ಧಿರೇಷಾ। ಅಹಂ ಕರೋಮೀತಿ ವೃಥಾಭಿಮಾನಃ ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ||
ಸುಖ, ದುಃಖಗಳನ್ನು ಯಾರೂ ಉಂಟು ಮಾಡುವುದಿಲ್ಲ. ಇನ್ನೊಬ್ಬನು ಉಂಟು ಮಾಡುತ್ತಾನೆ ಎಂಬುದು ತಿಳಿವಳಿಕೆ ಇಲ್ಲದವರ ಮಾತು. ತಾನೇ ಅವುಗಳಿಗೆ ಕಾರಣ ಎಂಬುದು ಅಹಂಕಾರ. ಈ ಲೋಕವೆಂಬುದು ತನ್ನ ಕರ್ಮವೆಂಬ ಸೂತ್ರದಿಂದ ಬಂಧಿತವಾಗಿದೆಯಷ್ಟೇ.
—
ಇಂದಿನ ಪದಾರ್ಥ
ಅತಿಕ್ಲೇಶ= Great distress
ಅತಿಗ = Going Beyond
—
ಇಂದಿನ ಓದು
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||
47) ಹೃಷೀಕೇಶಃ
ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!
ಹೃಷೀಕಗಳಿಗೆ ಈಶ ಹೃಷೀಕೇಶ. ಇಲ್ಲಿ ಹೃಷೀಕ ಎಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡಬೇಕು. ಉಪನಿಷತ್ತಿನಲ್ಲಿ ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ, ಅದರಲ್ಲಿ ನಿಂತು ನಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು ಕೇಶವ ಎಂಬಲ್ಲಿ ವಿಶ್ಲೇಷಿಸಿದ್ದೇವೆ.
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ. ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ (ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ – Pineal Gland, Pituitary Gland, Thyroid
and parathyroid, Adrenal Glands, Pancreas & Gonads). ಅದೇ ರೀತಿ ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜತೆಗೆ ಸಮ್ಮಿಲನ ಮಾಡುವ ಕ್ರಿಯೆಯನ್ನು ‘ಹೋಮ’ ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ). ಈ ಎಲ್ಲಾ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ.
***