newsics.com
ವ್ಯಕ್ತಿಯೋರ್ವ ತನ್ನ ಕಾಯಿಲೆಯಿಂದಲೇ ಗಿನ್ನಿಸ್ವರ್ಲ್ಡ್ ರೆಕಾರ್ಡ್ಪಟ್ಟ ಗಿಟ್ಟಿಸಿಕೊಂಡಿದ್ದಾನೆ. ಲಲಿತ್ ಪಾಟೀದಾರ್ ಎನ್ನುವ 18 ವರ್ಷದ ಹುಡುಗ hypertrichosis ಎನ್ನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇಡೀ ಜಗತ್ತಿನಲ್ಲಿ ಈ ಥರದ ಕಾಯಿಲೆ ಇರುವವರು ಕೇವಲ 50 ಮಂದಿ. ಅವರಲ್ಲಿ ಲಲಿತ್ ಕೂಡ ಓರ್ವರು. ಈ ರೀತಿ ಕಾಯಿಲೆ ಇದ್ದಾಗ ಮುಖದ ತುಂಬ ಅಸಹಜವಾಗಿ ಕೂದಲು ಬೆಳೆಯುತ್ತದೆ. ಇವರ ಮುಖದಲ್ಲಿ 95% ಕೂದಲು ಇದೆ. ಮುಖದಲ್ಲಿ ಒಂದು ಸ್ಕ್ಯಾರ್ ಸೆಂಟಿಮೀಟರ್ಗೆ 201.72 ಕೂದಲು ಇವೆಯಂತೆ.
ನೆಗೆಟಿವ್ ಮಾತುಗಳನ್ನು ಲೆಕ್ಕಕ್ಕೆ ತಗೊಳ್ಳದ ಲಲಿತ್ ಅವರು ಯೂನಿಕ್ ಐಡೆಂಟಿಟಿ ಹೊಂದಿರೋದನ್ನು ಸಂಪೂರ್ಣವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಯುಟ್ಯೂಬ್ ಚಾನೆಲ್ ಹೊಂದಿರುವ ಅವರು ದಿನನಿತ್ಯದ ದಿನಚರಿಯನ್ನು ವ್ಲಾಗ್ ರೀತಿಯಲ್ಲಿ ಅಪ್ಲೋಡ್ ಮಾಡುತ್ತಾರೆ.
ವಿಶ್ವದಾಖಲೆ ಆಗಿರುವ ಬಗ್ಗೆ ಮಾತನಾಡಿದ ಲಲಿತ್ ಪಾಟೀದಾರ್ ಅವರು, “ನನಗೆ ಮಾತೇ ಬರುತ್ತಿಲ್ಲ. ಈ ರೀತಿ ಗುರುತಿಸಿದ್ದು ನನಗೆ ತುಂಬ ಖುಷಿ ಕೊಟ್ಟಿದ್ದು, ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಅಂತ ತಿಳಿಯುತ್ತಿಲ್ಲ. ಈಗ ಜನರು ನನ್ನ ಬಳಿ ಬಂದು ಮುಖದ ಮೇಲಿನ ಕೂದಲನ್ನು ಶೇವ್ ಮಾಡು ಅಂತ ಹೇಳುವ ಅವಶ್ಯಕತೆ ಇರೋದಿಲ್ಲ. ನಾನು ಹೇಗಿದ್ದೇನೋ ಹಾಗೆ ಇರ್ತೀನಿ, ನನ್ನ ಲುಕ್ ಬದಲಾಯಿಸಿಕೊಳ್ಳೋದಿಲ್ಲ ಅಂತ ಅವರಿಗೆಲ್ಲ ಹೇಳುವೆ” ಎಂದು ಹೇಳಿದ್ದಾರೆ.
https://www.instagram.com/reel/DG2oz-6vQ5n/?igsh=ZzNja2loZTB2d3ht