newsics.com
ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಹಗರಣಗಳನ್ನು ಎಲ್ಲರೆದುರಲ್ಲೂ ಬಯಲು ಮಾಡಲು ರೋಗಿಯೊಬ್ಬ ಐಸಿಯುನಿಂದಲೇ ಓಡಿ ಹೋಗಿದ್ದಾನೆ.
ನಾನು ಕೋಮಾದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಚಿಕಿತ್ಸೆಯ ನೆಪದಲ್ಲಿ ನನ್ನ ಕುಟುಂಬದವರಿಂದ 1 ಲಕ್ಷ ರೂ. ಹಣ ಪಾವತಿ ಮಾಡುವಂತೆ ಹೇಳಿದ್ದಾರೆ ಎಂದು ಆತ ಆರೋಪಿಸಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶ ರತ್ಲಂನಲ್ಲಿ ನಡೆದಿದ್ದು, ನನ್ನನ್ನು ಐಸಿಯುನಲ್ಲಿ ಕೂಡಿ ಹಾಕಿ ನನ್ನ ಕುಟುಂಬದವರ ಬಳಿ 1 ಲಕ್ಷ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ರೋಗಿಯೊಬ್ಬ ಖಾಸಗಿ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾನೆ. ಐಸಿಯುನಲ್ಲಿದ್ದ ಆತ ಬ್ರೀಥಿಂಗ್ ಪೈಪ್ ಸಮೇತ ತಪ್ಪಿಸಿಕೊಂಡು ಹೋಗಿ, ಆಸ್ಪತ್ರೆಯ ಆವರಣದಲ್ಲಿ ನಿಂತು, ಅದೇ ಆಸ್ಪತ್ರೆಯ ವಿರುದ್ಧ ಪ್ರತಿಭಟಿಸಿದ್ದಾನೆ.