newsics.com
ರೈತರೊಬ್ಬರು ಬೋರ್‌ವೆಲ್ ಕೊರೆಸುವಾಗ ನೀರು ಸಿಕ್ಕ ಖುಷಿಗೆ ಹೃದಯ ತುಂಬಿ ಕುಣಿದಿದ್ದಾರೆ. ಕೃಷಿಯ ಸಲುವಾಗಿ ಜಮೀನಿನಲ್ಲಿ ಕೊಳವೆ ಬಾರಿ ಕೊರೆಸಿದ್ದು, ಹೀಗೆ ಬೋರ್‌ವೆಲ್ ಕೊರೆಯುವಾಗ ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು, ಈ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಹೊಲದಲ್ಲಿ ಬೋರ್‌ವೇಲ್ ಕೊರೆಸುವಾಗ ನೀರು ಬಾನೆತ್ತರಕ್ಕೆ ಚಿಮ್ಮಿದ್ದು, ಗಂಗೆ ಸಿಕ್ಕ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಆ ನೀರನ್ನು ತೀರ್ಥದಂತೆ ಒರೆಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸಖತ್ ವೈರಲ್ ಆಗುತ್ತಿದೆ.
https://x.com/NaaTelanganaa/status/1896163459236274556?ref_src=twsrc%5Etfw%7Ctwcamp%5Etweetembed%7Ctwterm%5E1896163459236274556%7Ctwgr%5Ebdacf418d3a26c1423a459381fee5e50dfbdd05a%7Ctwcon%5Es1_c10&ref_url=https%3A%2F%2Fapi-news.dailyhunt.in%2F
NaaTelanganaa ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಈ ಸಂತೋಷವೇನು ಎಂದು ಎಲ್ಲರಿಗೂ ಅರ್ಥವಾಗಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೈತರೊಬ್ಬರು ಕೊಳವೆಬಾವಿ ಕೊರೆಸುವಾಗ ನೀರು ಸಿಕ್ಕ ಖುಷಿಗೆ ಕುಣಿದು ಕುಪ್ಪಳಿಸುವಂತಹ ದೃಶ್ಯವನ್ನು ಕಾಣಬಹುದು. ನಂತರ ಅದೇ ನೀರನ್ನು ತೀರ್ಥದಂತೆ ಸ್ವೀಕರಿಸಿ ಅದನ್ನು ತಲೆಗೆ ಒರೆಸಿಕೊಂಡಿದ್ದಾರೆ.