newsics.com
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯನಿರ್ವಹಣೆ ಬಗ್ಗೆ ತಿಳಿಯಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ತಂಡ ಬುಧವಾರ ಬೆಂಗಳೂರಿಗೆ ಭೇಟಿ ನೀಡಿತ್ತು.
ನಿಗಮದಲ್ಲಿನ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ ಐ.ಒ.ಎಫ್.ಎಸ್. ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ವಿವರವಾಗಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿ, ವಿವಿಧ ಮಾದರಿಯ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸ್ಸುಗಳ ಕಾರ್ಯನಿರ್ವಹಣೆ, ಪುನಃಶ್ಚೇತನ ಕಾರ್ಯ, ರೂ.1 ಕೋಟಿ On duty / Off duty accident insurance, KSRTC AROGYA ಯೋಜನೆ, ವಿದ್ಯಾ ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನಗಳ ಉಪಕ್ರಮಗಳಾದ HRMS, ಆನ್ ಲೈನೆ ಜಿಯೋ ಟ್ಯಾಗ್ ಹಾಜರಾತಿ, Business Intelligent Dashboard, AWATAR 4.0, UPI, ಉಪಕ್ರಮಗಳ ಕುರಿತು ಬಹಳ ಸಂತಸ ವ್ಯಕ್ತಪಡಿಸಿದರು.
ನಿರ್ದೇಶಕಿ ಡಾ.ನಂದಿನಿ ದೇವಿ,
ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಆರ್ಥಿಕ ಸಲಹೆಗಾರ ಎ.ಶಾಜಿ, ಪ್ರಧಾನ ವ್ಯವಸ್ಥಾಪಕ ಉಲ್ಲಾಸ್‌ಬಾಬು ಅವರಲ್ಲದೆ ಉಭಯ ರಾಜ್ಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Ranya Rao 15 ದಿನಗಳ ಅವಧಿಯಲ್ಲಿ ಹಲವು ಬಾರಿ ದುಬೈಗೆ ನಟಿ ರನ್ಯಾ ರಾವ್ ಪ್ರಯಾಣ
Ranya Rao ನಟಿ ರನ್ಯಾ ರಾವ್ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ..?