newsics.com
ಲಕ್ನೋ: ಮದುವೆಗೆ ಸಿದ್ಧಗೊಳ್ಳುತ್ತಿದ್ದ ವಧುವನ್ನು ಮಾಜಿ ಪ್ರೇಮಿಯೇ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಮೃತತ ಯುವತಿಯನ್ನು 22 ವರ್ಷದ ಕಾಜಲ್ ಅಹಿರ್‌ವಾರ್ ಎಂದು ಗುರುತಿಸಲಾಗಿದೆ.ಹುಡುಗಿ ಮದುವೆಯ ದಿನದ ಅಲಂಕಾರಕ್ಕಾಗಿ ಬ್ಯೂಟಿಪಾರ್ಲರ್‌ನಲ್ಲಿ ರೆಡಿ ಆಗುತ್ತಿದ್ದಾಗಲೇ ಬಲವಂತವಾಗಿ ಒಳಗೆ ನುಗ್ಗಿದ ಮಾಜಿ ಪ್ರೇಮಿ ಆಕೆಯ ಮೇಲೆ ಸಮೀಪದಿಂದಲೇ ಹಲವು ಬಾರಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಮಧ್ಯಪ್ರದೇಶ ಡಟಿಯಾ ನಿವಾಸಿಯಾದ ಈಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತಾದರೂ ಅದು ಫಲ ನೀಡಲಿಲ್ಲ.
ಯುವತಿಯನ್ನು ಮದುವೆ ದಿನವೇ ಕೊಲೆ ಮಾಡಿದ ಯುವಕನನ್ನು ದೀಪಕ್ ಎಂದು ಗುರುತಿಸಲಾಗಿದ್ದು, ಕೃತ್ಯವೆಸಗುವ ವೇಳೆ ಆತ ಮುಖವನ್ನು ಮುಚ್ಚಿಕೊಂಡು ಜೋರಾಗಿ ಕಿರುಚಿ ಬಳಿಕ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯ ನಂತರ ಆತ ಸ್ಥಳದಿಂದ ಓಡಿ ಹೋಗಿದ್ದಾನೆ.