Newsics. Com
ಬೆಂಗಳೂರು : ಜುಲೈ 1ರಿಂದ ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ಗಳು ಬಿಬಿಪಿಎಸ್ ಸಿಸ್ಟಂ ಮುಖಾಂತರ ಆಗಬೇಕು ಎಂದು ಆರ್ಬಿಐ ನಿರ್ದೇಶನ ಹೊರಡಿಸಿದೆ.
ಬಿಬಿಪಿಎಸ್ ಅಥವಾ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ ಮೂಲಕವೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ತಂದಿದೆ. ಜುಲೈ 1ಕ್ಕೆ ಇದು ಜಾರಿಗೆ ಬರಲಿದೆ.
ಎಚ್ಡಿಎಫ್ಸಿ, ಎಕ್ಸಿಸ್ ಇತ್ಯಾದಿ ಪ್ರಮುಖ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಈ ಸಿಸ್ಟಂ ಅಳವಡಿಸಿಕೊಂಡಿಲ್ಲ. ಹೀಗಾಗಿ, ಫೋನ್ ಪೆ ಮೊದಲಾದವುಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗುವುದಿಲ್ಲ.
ಕ್ರೆಡ್, ಫೋನ್ಪೆ, ಬಿಲ್ಡೆಸ್ಕ್ ಇತ್ಯಾದಿ ಫಿನ್ಟೆಕ್ ಕಂಪನಿಗಳ ಪೆಮೆಂಟ್ ಪ್ಲಾಟ್ಫಾರ್ಮ್ಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಜುಲೈ 1ರಿಂದ ಕಷ್ಟವಾಗಬಹುದು.
34 ಕ್ರೆಡಿಟ್ ಕಾರ್ಡ್ ಸಂಸ್ಥೆಗಳ ಪೈಕಿ ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರ ಬ್ಯಾಂಕ್, ಇಂಡಸ್ಇಂಡ್, ಫೆಡರಲ್ ಬ್ಯಾಂಕ್ ಸೇರಿದಂತೆ ಎಂಟು ಮಾತ್ರವೇ ಬಿಬಿಪಿಎಸ್ ಅನ್ನು ಸಕ್ರಿಯಗೊಳಿಸಿವೆ. ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ, ಎಕ್ಸಿಸ್ ಬ್ಯಾಂಕ್ ಮೊದಲಾದವು ಬಿಬಿಪಿಎಸ್ ಅನ್ನು ಅಳವಡಿಸಿಲ್ಲ. ಈ ಸಂಸ್ಥೆಗಳ 5 ಕೋಟಿಗೂ ಅಧಿಕ ಕ್ರೆಡಿಟ್ ಕಾರ್ಡ್ಗಳು ಗ್ರಾಹಕರ ಬಳಿ ಇವೆ.