newsics.com
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ನ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ಲ್ಲಿ ಮತ್ತಷ್ಟು ರೋಚಕ ವಿಚಾರಗಳ ಹೊರಬಿದ್ದಿವೆ. ದರ್ಶನ್ ಮೊಬೈಲ್ ರಹಸ್ಯ, ಪವಿತ್ರಾಗೌಡ 2 ಕೋಟಿ ನಿಗೂಢ ಹಣ ಹೀಗೆ ಸಾಲು ಸಾಲು ಮಾಹಿತಿಗಳು ಹೊರಬರುತ್ತಲೇ ಇವೆ.
ಪ್ರಕರಣದ ನಾಲ್ವರು ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ನ್ನು ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಸ್ಥಳಾಂತರಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ತುಮಕೂರು ಜೈಲಿಗೆ ಸ್ಥಳಾಂತರಕ್ಕೆ ಆರೋಪಿಗಳ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಸ್ಥಳಾಂತರ ಅಗತ್ಯದ ಬಗ್ಗೆ ಕೋರ್ಟ್ಗೆ ಎಸ್ಪಿಪಿ ಪಿ.ಪ್ರಸನ್ನಕುಮಾರ್ ವಿವರಣೆ ನಂತರ ಸ್ಥಳಾಂತರಕ್ಕೆ ಆದೇಶಿಸಲಾಯಿತು