newsics.com
ನವದೆಹಲಿ: ದೆಹಲಿ ಮೆಟ್ರೋದಲ್ಲಿ ಮಹಿಳೆಯೊಬ್ಬಳು ಬಾಡಿ ಶೇಮಿಂಗ್ ಮಾಡಿದ ಘಟನೆಯೊಂದು ನಡೆದಿದೆ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಮಧ್ಯವಯಸ್ಸಿನ ಮಹಿಳಾ ಪ್ರಯಾಣಿಕಳೊಬ್ಬಳು ಬಾಡಿ ಶೇಮಿಂಗ್ ಮಾಡಿದ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ವಿಡಿಯೊದಲ್ಲಿ, ಮಧ್ಯವಯಸ್ಕ ಮಹಿಳೆ ಕಿರುಚುವುದು ಸೆರೆಯಾಗಿದೆ. ಇನ್ನು ಈ ಘಟನೆಗೆ ಮುಖ್ಯ ಕಾರಣವೆಂದರೆ ಮೆಟ್ರೋದಲ್ಲಿ ಪ್ರಯಾಣಿಕಳೊಬ್ಬಳು ಚಿಪ್ಸ್ ತಿಂದಿದ್ದಂತೆ. ಇನ್ನು ಈ 20 ವರ್ಷದ ಯುವತಿ ಚಿಪ್ಸ್ ತಿಂದವಳ ಪರವಾಗಿ ಮಾತನಾಡಿದ್ದಕ್ಕೆ ಮಹಿಳೆ ಸಿಟ್ಟಾಗಿ ಈಕೆಯ ಮೇಲೆ ಹರಿಹಾಯ್ದಿದ್ದಾಳೆ. “ನೀನು ದಪ್ಪಗಿದ್ದಿಯಾ, ನೋಡುವುದಕ್ಕೆ 50 ವರ್ಷದವಳ ಹಾಗೇ ಕಾಣುತ್ತಿದ್ದಿಯಾ ಎಂದೆಲ್ಲಾ ಮಹಿಳೆ ಯುವತಿಗೆ ನಿಂದಿಸಿದ್ದಾಳೆ. ಕೊನೆಗೆ ಸಹಪ್ರಯಾಣಿಕರೊಬ್ಬರು ಮದ್ಯಪ್ರವೇಶಿಸಿ ಈ ರೀತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ.