newsics.com
ಮುಂಬೈ : ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆಗೆ ಕುಂಭಮೇಳಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಮಿoದೆ ದಿದ್ದಾರೆ.
ಈ ಬಾರಿ ಇಲ್ಲಿಗೆ ಬಂದಿರುವ ನಾನು ಪುಣ್ಯವಂತೆ. ತುಂಬ ಖುಷಿ ಆಗುತ್ತಿದೆ. ಇದು ಬಹಳ ಸುಂದರವಾದ ಸ್ಥಳ. ಈಗ ನಾನು ಸ್ವಾಮಿಜಿ ಜೊತೆ ಇದ್ದೇನೆ. ಅವರ ಆಶೀರ್ವಾದ ಪಡೆದಿದ್ದೇನೆ. ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ ಎಂದು ಕತ್ರಿನಾ ಕೈಫ್ ಅವರು ಖಾಸಗಿ ವಾಹಿನಿಗೆ ಹೇಳಿದ್ದಾರೆ.

ನಟಿ ಕತ್ರಿನಾ ಕೈಫ್ ಅವರು ಅತ್ತೆ ವೀಣಾ ಕೌಶಲ್ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಇಬ್ಬರೂ ಪರಮಾರ್ಥ ನಿಕೇತನಕ್ಕೆ ಭೇಟಿ ನೀಡಿ ತಮ್ಮ ಮಹಾಕುಂಭ ಶಿಬಿರದಲ್ಲಿ ತಂಗಿದರು.

ಪರಮಾರ್ಥ್ ನಿಕೇತನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕತ್ರಿನಾ ಕೈಫ್ ಹಾಗೂ ವೀಣಾ ಕೌಶಲ್ ಅವರು ಭೇಟಿ ನೀಡಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ