newsics.com
ಹೈದ್ರಾಬಾದ್ : ನಟಿ ಶ್ರೀಲೀಲಾ ಪ್ರಖ್ಯಾತ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಕುರಿತಾದ ಸುದ್ದಿ ಸೋಶಿಯ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ತಮಿಳು ಸ್ಟಾರ್ ಅಜಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಹೀಗಿರುವಾಗ ಇದೀಗ ಶ್ರೀಲೀಲಾ ಈ ಸಿನಿಮಾದ ಮೂಲಕ ಬಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾರೆ. ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಖಾನ್ ಸದ್ಯ ‘ದಿಲಾರ್’ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಎರಡು ಚಿತ್ರಗಳು ಹಿಟ್ ಆದಲ್ಲಿ ಶ್ರೀಲೀಲಾ ಅವರ ಲೆವೆಲ್ ಮತ್ತೇ ಬೇರೆನೇ ಇರುತ್ತೆ..
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಶ್ರೀಲೀಲಾ ಕೆಲವೊಮ್ಮೆ ತಮ್ಮ ಸಿನಿಮಾದ ವೈಶಿಷ್ಟ್ಯಗಳ ಜೊತೆಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ Ask me Anything session ಮಾಡಿದ್ದರು.. ಅದರ ಭಾಗವಾಗಿ ಬಹಳಷ್ಟು ಜನರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಐ ಲವ್ ಯೂ ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಶ್ರೀ ಲೀಲಾ ‘ಉಮ್ ಆ.. ಉಮ್ ಆ.. ಐ ಲವ್ ಯೂ’ ಎಂದು ಉತ್ತರಿಸಿದ್ದಾರೆ… ಸದ್ಯ ನಟಿಯ ಉತ್ತರದ ಸ್ಕ್ರೀನ್ ಶಾಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.