newsics.com
ಬೆಂಗಳೂರು : ಕನ್ನಡದ ನಟಿ ಚೈತ್ರಾ ಆಚಾರ್ ಅವರು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕುರಿತಾದ ಫೋಟೋ ವೈರಲ್ ಆಗಿದೆ.
ಒಂದೇ ಜಡೆ ಹಾಕಿಕೊಂಡು ಕಾಣಿಸಿರೋ ರೀತಿನೂ ಇಂಟ್ರಸ್ಟಿಂಗ್ ಅನಿಸುತ್ತದೆ. ಮೂಗಿಗೆ ಹಾಕಿಕೊಂಡಿರೋ ರಿಂಗ್ ಕೂಡ ತುಂಬಾನೆ ಚೆನ್ನಾಗಿ ಒಪ್ಪುತ್ತಿದೆ. ಕೈಗಳಿಗೆ ತೊಟ್ಟ ಮುತ್ತಿನ ಬಳೆಗಳೂ ಇಡೀ ಡ್ರೆಸ್ಗೆ ಚೆನ್ನಾಗಿಯೇ ಕಾಣಿಸುತ್ತಿವೆ.

ಚೈತ್ರಾ ಆಚಾರ್ ಬಿಕಿನಿ ತೊಟ್ಟಿರೋದು ಇದೆ. ಪಡ್ಡೆಗಳ ನಿದ್ದೆಗೆಡಿಸಿರೋದು ಇದೆ. ಆದರೆ, ಈ ಬೋಲ್ಡ್ನೆಸ್ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಗೋದಿಲ್ಲ. ಸ್ವತಃ ಚೈತ್ರಾ ಆಚಾರ್ ಕೂಡ ಈ ಕುರಿತು ಹೆಚ್ಚು ಏನೂ ಹೇಳಿಕೊಳ್ಳುವುದಿಲ್ಲ. ತಮ್ಮಗೆ ಏನು ಅನಿಸುತ್ತದೆಯೋ ಆ ಹೊಸ ಪ್ರಯೋಗಕ್ಕೆ ರೆಡಿ ಆಗಿ ಬಿಡ್ತಾರೆ.

ಕನ್ನಡದಲ್ಲಿಯೇ ಗುರುತಿಸಿಕೊಂಡು ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ನಟ-ನಿರ್ದೇಶಕ ಶಶಿಕುಮಾರ್ ಚಿತ್ರದಲ್ಲಿಯೇ ಚೈತ್ರಾ ಆಚಾರ್ ಅಭಿನಯಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.