newsics.com
ಬೆಂಗಳೂರು : ನಟಿ ಮೇಘಶ್ರೀ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೋಟೋಗಳು ವೈರಲ್ ಆಗಿದೆ.
ಹೊಸ ವರ್ಷದ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡು, ತಾವು ಮದುವೆಯಾಗುತ್ತಿರೋ ಹುಡುಗನ ಫೋಟೋವನ್ನು ರಿವೀಲ್ ಮಾಡಿದ್ದರು.
ಮದುವೆ ಆಗುತ್ತಿರೋ ಹುಡುಗ ಯಾರು ಅಂತ ಕೂಡ ರಿವೀಲ್ ಮಾಡಿರಲಿಲ್ಲ. ಇದೀಗ ಕುಂದಾಪುರ ಮೂಲದ ಪುರಂದರ ಎಂಬುವವರ ಜೊತೆಗೆ ನಟಿ ಮದುವೆಯಾಗಿದ್ದಾರೆ.
ಸತ್ಯ, ಮೈನಾ, ನಿನ್ನ ಜೊತೆ ನನ್ನ ಕಥೆ, ಪುಣ್ಯವತಿ ಸೇರಿದಂತೆ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟಿ ಮೇಘಶ್ರೀ ಗೌಡ ಹ್ಯಾಪಿ ಮೂಡ್ನಲ್ಲಿದ್ದಾರೆ.
