newsics.com
ಬೆಂಗಳೂರು: ಇಷ್ಟು ದಿನ ಮನೆಯಿಂದ ಹೊರಗೆ ಬಂದರೆ ಚುಮುಚುಮು ಚಳಿಗೆ ನಡುಗುತ್ತಿದ್ದ ಜನ, ಬೇಸಿಗೆ ಆರಂಭವಾಗೋದಕ್ಕೂ ಮುಂಚೆ ಬೇಸಿಗೆಯಲ್ಲಿ ಬೆಂದು ಬೆವರಳಿದ್ದಾರೆ.
ರಾಜ್ಯದಲ್ಲಿ ಪೂರ್ವ ಬೇಸಿಗೆ ಅಬ್ಬರ ಜೋರಾಗಿದೆ. ಈ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗಿದ್ದು, ಮುಂದಿನ ವಾರ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಜನರಲ್ಲಿ ಆತಂಕ ಎಚ್ಚಿಸಿದೆ.
ರಾಜ್ಯದಲ್ಲಿ ಮುಂದಿನ 7 ದಿನ ಒಣಹವೆ ಮುಂದುವರಿಕೆಯಾಗಲಿದ್ದು, 20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 35.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ಇಲ್ಲಿಯವರೆಗೆ ಬೆಂಗಳೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ಮಾತ್ರವೇ ಭಾರೀ ಪ್ರಮಾಣದ ಉಷ್ಣಾಂಶವಾಗಿದೆ.
ಬಿಸಿ ಬಿಸಿ ಬೇಸಿಗೆ
- ಬೆಂಗಳೂರು- ಗರಿಷ್ಠ ಉಷ್ಣಾಂಶ : 33.8 ಸೆಲ್ಸಿಯಸ್
- ಕಲಬುರಗಿ ಹಾಗೂ ಕೊಪ್ಪಳ- ಗರಿಷ್ಠ ಉಷ್ಣಾಂಶ : 33°ಸೆಲ್ಸಿಯಸ್
- ಬಿಜಾಪುರ, ಬೆಳಗಾವಿ, ಗದಗ, ಶಿವಮೊಗ್ಗ- ಗರಿಷ್ಠ ಉಷ್ಣಾಂಶ : 35°ಸೆಲ್ಸಿಯಸ್
ಮುಂದಿನ 7 ದಿನಗಳ ವರದಿ
- ಬೆಂಗಳೂರು & ಒಳನಾಡಿನಲ್ಲಿ- ಗರಿಷ್ಠ ಉಷ್ಣಾಂಶ: 32-34 ಸೆಲ್ಸಿಯಸ್
- ಉತ್ತರ ಒಳನಾಡಿನಲ್ಲಿ- ಗರಿಷ್ಠ ಉಷ್ಣಾಂಶ: 35 ರಿಂದ 37°ಸೆಲ್ಸಿಯಸ್
- ಕರಾವಳಿ ಜಿಲ್ಲೆಗಳಲ್ಲಿ- ಗರಿಷ್ಠ ಉಷ್ಣಾಂಶ: 33 ರಿಂದ 35 ಸೆಲ್ಸಿಯಸ್
- ದಕ್ಷಿಣ ಒಳನಾಡು- ಗರಿಷ್ಠ ಉಷ್ಣಾಂಶ: ಎಲ್ಲೆಡೆ ಒಣಹವೆ
Youtube capital ತುಳಸಿ ಗ್ರಾಮ ದೇಶದ ಯೂಟ್ಯೂಬ್ ರಾಜಧಾನಿ! ಇಲ್ಲಿದ್ದಾರೆ ಸಾವಿರಾರು ಯೂಟ್ಯೂಬರ್ಸ್!