newsics.com
ಬೆಂಗಳೂರು: ಕೆಲಸ ಮಾಡುವ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯ ಆಕಾಶವಾಣಿ ಲೇಔಟ್‌ನಲ್ಲಿ ನಡೆದಿದೆ.
ಮೃತ ಕಾರ್ಮಿಕನ ಸೈಯದ್ ಮೆಹಬೂಬ್ ಪಾಷ, ಆರೋಪಿಯನ್ನು ಖಾನಿಯಾ ಎಂದು ಗುರುತಿಸಲಾಗಿದೆ.
ಇಬ್ಬರು ಕಾರ್ಮಿಕರು ಜೆಲ್ಲಿ, ಮರಳು ಟಾಟಾ ಏಸ್ ಗಾಡಿಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜು ಎನ್ನುವ ವ್ಯಕ್ತಿ ಜೊತೆಗೂಡಿ ಮೃತ ಮೆಹಬೂಬ್ ಜೆಲ್ಲಿ, ಮರಳು ವ್ಯಾಪಾರ ಮಾಡುತ್ತಿದ್ದರು. ಭಾನುವಾರ ರಾತ್ರಿ ರಾಜು, ಮೆಹಬೂಬ್‌ಗೆ ಕರೆ ಮಾಡಿ ಬಾಡಿಗೆಯಿದೆ ಬಾ ಎಂದು ಕರೆದಿದ್ದ. ಅಲ್ಲಿ ಮಾತಿಗೆ ಮಾತು ಬೆಳೆದು ಸಿಮೆಂಟ್ ಚೀಲ ಕಟ್ ಮಾಡಲು ಬಳಸುತ್ತಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಖಾನಿಯಾ ಎಸ್ಕೇಪ್ ಆಗಿದ್ದಾನೆ.
ಬಳಿಕ ಅಂಗಡಿ ಪಕ್ಕದ ಪರಿಚಯಸ್ಥರು ಮೆಹಬೂಬ್ ಕುಟುಂಬಸ್ಥರಿಗೆ ಕರೆ ಮಾಡಿ ಯಾರೋ ಹೊಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಸದ್ಯ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ.