newsics.com
ನವದೆಹಲಿ : ಸಿಂಗಲ್ ಆಗಿದ್ದ ಬಾಯ್ಸ್ಗೆ ಸುಂದರಿಯೊಬ್ಬಳು ವಿಶೇಷ ಆಫರ್ ಒಂದನ್ನು ನೀಡಿದ್ದಾಳೆ. ಆಕೆ ಸೂಕ್ತ ಬಾಯ್ ಫ್ರೆಂಡ್ ಒಬ್ಬರನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಮಾತ್ರವಲ್ಲದೆ ಅದಕ್ಕಾಗಿ ಅರ್ಜಿ ಕೂಡ ಆಹ್ವಾನಿಸಿದ್ದಾಳೆ.
ಇದುವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಈ ಹುಡುಗಿಗೆ ಬಾಯ್ ಫ್ರೆಂಡ್ ಆಗಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಯಾರೂ ಅವಳ ಷರತ್ತುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
27 ವರ್ಷದ ವೆರಾ ಡಿಕ್ಮ್ಯಾನ್ಸ್ ಲಂಡನ್ ಮೂಲದ ಮಾಡೆಲ್. ಸಾಮಾಜಿಕ ಮಾಧ್ಯಮದಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಾಯ್ಫ್ರೆಂಡ್ಗಾಗಿ ಹುಡುಕಾಟ ಆರಂಭಿಸಿದಾಗ ಸಾವಿರಾರು ಪ್ರತಿಕ್ರಿಯೆಗಳು ಬಂದಿವು.
Vera ಕಂಟೆಂಟ್ ಕ್ರಿಯೇಟರ್ ಮತ್ತು ಇನ್ಸ್ಟಾಗ್ರಾಮ್ ಇನ್ಫ್ಲೂಯೆನ್ಸರ್ ಕೂಡ ಆಗಿದ್ದಾಳೆ. ತಾನು ಬಾಯ್ಫ್ರೆಂಡ್ಗಾಗಿ ಹುಡುಕುತ್ತಿರುವುದಾಗಿ ಮತ್ತು ಹುಡುಗರಿಂದ ಅರ್ಜಿ ಸ್ವೀಕರಿಸುತ್ತಿರುವುದಾಗಿ ಆಕೆ 2023ರಲ್ಲಿ ಎಂದು ಹೇಳಿದಾಗ ಅವರು ಮೂವರು ಯುವಕರನ್ನು ಶಾರ್ಟ್ ಲಿಸ್ಟ್ ಮಾಡಿದ್ದಳು. ಮಾತ್ರವಲ್ಲ ಆಕೆ ಅವರ ಜೊತೆ ಡೇಟಿಂಗ್ ಕೂಡ ಹೋಗಿದ್ದಳು. ಆದ್ರೆ, ಅದಾದ ಬಳಿಕ ಆತನಿಂದ ಆಕೆ ಮೋಸ ಹೋಗಿರುವುದಾಗಿ ಹೇಳಿದ್ದಾಳೆ.
ತನ್ನನ್ನು ಇಷ್ಟಪಡುವ ಹುಡುಗ ರಾಜಕುಮಾರಿ ರೀತಿ ನೋಡಿಕೊಳ್ಳಬೇಕು. ಮತ್ತು ನಾನು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ವೆರಾ ಹೇಳಿಕೊಂಡಿದ್ದಾಳೆ. ಮಹಿಳೆಯರಿಗಾಗಿ ಡೇಟಿಂಗ್ ಸಲಹೆಗಳನ್ನು ಹಂಚಿಕೊಂಡಿರುವ ವೆರಾ, ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳಬೇಕು ಮತ್ತು ಪುರುಷರೊಂದಿಗೆ ತಮ್ಮದೇ ಆದ ಮಿತಿಗಳನ್ನು ಹೊಂದಿರಬೇಕು ಎಂದು ಹೇಳಿದರು.
ಪುರುಷರಿಗಾಗಿ ಒಂದು ಟೈಮ್ ರಚಿಸಬೇಕು. ಒಬ್ಬ ಮಹಿಳೆ ಪುರುಷನನ್ನು ಭೇಟಿಯಾದಾಗಲೆಲ್ಲಾ ಅವನು ಆಕೆಯನ್ನು ಡೇಟಿಂಗ್ಗೆ ಕರೆದುಕೊಂಡು ಹೋಗಬೇಕು ಎಂದು ಮಹಿಳೆ ಬಯಸುವುದಾಗಿಯೂ ಹೇಳಿದ್ದಾಳೆ. ಹುಡುಗರು ತಡರಾತ್ರಿ ಮನೆಗೆ ಹೋಗುವುದನ್ನು ನಿಲ್ಲಿಸಬೇಕು. ಹಾಗೂ ಹುಡುಗರು ವಾರಕ್ಕೊಂದು ದಿನ ಆಕೆಗಾಗಿ ಗಿಫ್ಟ್ ತರಬೇಕು ಎಂದು ಹೇಳಿಕೊಂಡಿದ್ದಾಳೆ. ಆನ್ಲೈನ್ಗೆ ಬದಲಾಗಿ ಆಫ್ಲೈನ್ನಲ್ಲಿ ಬಾಯ್ಫ್ರೆಂಡ್ಗಾಗಿ ಹುಡುಕಾಟ ನಡೆಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ರಾತ್ರಿ 10 ಗಂಟೆಯ ನಂತರ ಹುಡುಗರು ಹುಡುಗಿಯರಿಗೆ ಮೆಸೇಜ್ ಮಾಡುವುದನ್ನು ತಪ್ಪಿಸಬೇಕು ಎಂದಿದ್ದಾಳೆ.