newsics.com
ಬಿಗ್‌ಬಾಸ್‌ನಿಂದ ಹೊರಬಂದ ಕೂಡಲೇ ಕಿರುತೆರೆ ನಟಿಯೊರ್ವರು ಡಿವೋರ್ಸ್‌ಗೆ ಮುಂದಾಗಿದ್ದಾರೆ. ಹೌದು, ಸೋಷಿಯಲ್ ಮೀಡಿಯಾ ಬಳಕೆದಾರರು ಅಂದುಕೊಂಡಂತೆ ಸ್ಟಾರ್ ನಟಿ ಗಂಡನಿಂದ ದೂರ ಆಗುತ್ತಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದ್ದಾರೆ.
ವೀಣಾ ನಾಯರ್ ಮಾಲಿವುಡ್ ಖ್ಯಾತ ನಟಿ. ಇತ್ತೀಚಿಗೆ ನಟಿ ಪದೇ ಪದೇ ಕೇಳಿ ಬರುತ್ತಿರುವ ಪ್ರಶ್ನೆ ಏನೆಂದರೆ ಪತಿಯಿಂದ ಬ್ರೇಕ್ ಅಪ್ ಆಗಿದ್ದಾರಾ ಎಂಬುದು. ಕೆಲ ದಿನಗಳಿಂದ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದು, ನಂತರ ಇವರಿಬ್ಬರು ಬೇರ್ಪಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು. ಈ ಪ್ರಶ್ನೆಗೆ ಈಗ ವೀಣಾ ಉತ್ತರ ನೀಡಿದ್ದಾರೆ.
ನಾನು ಮತ್ತು ನನ್ನ ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಆದರೆ ವಿಚ್ಛೇದನ ಪಡೆದಿಲ್ಲ ಎಂದು ನಟಿ ಹೇಳಿರುವುದಾಗಿ ವರದಿಯಾಗಿದೆ. ಬಿಗ್ ಬಾಸ್ ತಮ್ಮ ವೈವಾಹಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವೀಣಾ ಹೇಳಿದ್ದಾರೆ. ಎಲ್ಲ ಸಮಸ್ಯೆಗಳಿಗೆ ಪೂರ್ಣವಿರಾಮ ಇರುವಂತೆಯೇ ಈ ಸಮಸ್ಯೆಗೂ ಪೂರ್ಣವಿರಾಮ ಬೀಳಲಿದ್ದು, ಆ ಪೂರ್ಣವಿರಾಮವನ್ನು ಶೀಘ್ರದಲ್ಲಿಯೇ ಎಲ್ಲರಿಗೂ ತಿಳಿಸಲಾಗುವುದು ಎಂದು ವೀಣಾ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೆಲ ದಿನಗಳ ನಂತರ ವೀಣಾ ನಾಯರ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವೀಣಾ ತಮ್ಮ ಪತಿ ಆರ್‌ಜೆ ಅಮನ್ ಅವರಿಂದ ದೂರವಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು.
2020ರಲ್ಲಿ ಮೋಹನ್ ಲಾಲ್ ಸಾರಥ್ಯದಲ್ಲಿ ನಡೆದ ಬಿಗ್ ಬಾಸ್‌ನಲ್ಲಿ ವೀಣಾ ನಾಯರ್ ಭಾಗವಹಿಸಿದ್ದರು. 63 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದರು.