newsics.com
ನವದೆಹಲಿ: ಉಚಿತ ಯೋಜನೆಗಳಿಗೆ ಹಣ ನೀಡಲು ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ. ಅವುಗಳು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ನಿರ್ಮಲಾ, ‘ಇಂತಹ ಉಚಿತಗಳ ಘೋಷಣೆ ಮಾಡುವ ಮುನ್ನ ರಾಜ್ಯದ ಆರ್ಥಿಕ ಸಾಮರ್ಥ್ಯದ ಕುರಿತು ಅಧ್ಯಯನ ಮಾಡುವುದು ಅಗತ್ಯ. ಇಂತಹ ತಯಾರಿಯನ್ನು ಬಿಜೆಪಿ ಆಡಳಿತ ಇರುವ ರಾಜ್ಯಗಳು ಮಾಡಿಯೇ ಉಚಿತ ಯೋಜನೆಗಳನ್ನು ಘೋಷಿಸುತ್ತಿವೆ’ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತ ಇರುವ ಯಾವ ರಾಜ್ಯವನ್ನು ಬೇಕಾದರೂ ನೋಡಿ. ಚುನಾವಣೆ ಸಮಯದಲ್ಲಿ ಅವುಗಳು ಮಾಡುವ ಘೋಷಣೆಗಳು ಬಜೆಟ್‌ಗೆ ಅನುಗುಣವಾಗಿರುತ್ತವೆ. ಆದರೆ ಹಿಮಾಚಲ ಹಾಗೂ ಕರ್ನಾಟಕ ರಾಜ್ಯಗಳು ದೊಡ್ಡದೊಡ್ಡ ಭರವಸೆಗಳನ್ನು ನೀಡಿ, ಅವುಗಳನ್ನು ಈಡೇರಿಸಲು ಹೆಣಗಾಡುತ್ತಿವೆ. ಆರ್ಥಿಕವಾಗಿ ಸಾಕಷ್ಟು ಉತ್ತಮ ಸ್ಥಿತಿಯಲ್ಲೇ ಇದ್ದ ಕರ್ನಾಟಕ, ಹಿಮಾಚಲ ರಾಜ್ಯಗಳು ಈಗ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ’ ಎಂದರು