newsics.com
ನವದೆಹಲಿ: ಮಧ್ಯಮ ವರ್ಗದವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025 ರ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದಾರೆ.
ವೇತನ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸುವ ಮೂಲಕ ದೊಡ್ಡ ಉಡುಗೊರೆ ನೀಡಿದ್ದಾರೆ. ಈಗ ದೇಶದಲ್ಲಿ 12 ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಅಲ್ಲದೆ, 75,000 ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಲಾಭವೂ ಸಿಗಲಿದೆ.
ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ ವಾರ್ಷಿಕ 12 ಲಕ್ಷ ರೂಪಾಯಿ ವರೆಗೆ ಆದಾಯ ಇದ್ದರೆ ತೆರಿಗೆ ವಿನಾಯಿತಿ ಪಡೆಯಬಹುದು. ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ 8 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ 30,000 ರೂ. ಉಳಿತಾಯವಾಗಲಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ. 9 ಲಕ್ಷ ರೂಪಾಯಿ ಆದಾಯ ಇರುವವರಿಗೆ 40,000 ರೂ. ಮತ್ತು 10 ಲಕ್ಷ ರೂ. ಆದಾಯ ಇರುವವರಿಗೆ 50,000 ರೂಪಾಯಿ ಉಳಿತಾಯವಾಗಲಿದೆ.

ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ, 11 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 65,000 ರೂ. ಉಳಿತಾಯವಾಗಲಿದೆ. 12 ಲಕ್ಷ ರೂ. ಆದಾಯ ಇದ್ದರೆ 80,000 ರೂ. ಉಳಿತಾಯವಾಗಲಿದೆ. 16 ಲಕ್ಷ ರೂ. ಆದಾಯ ಇದ್ದರೆ 50,000 ರೂ. ಉಳಿತಾಯವಾಗಲಿದೆ. 20 ಲಕ್ಷ ರೂ. ಆದಾಯ ಇದ್ದರೆ 50,000 ರೂ. ಉಳಿತಾಯವಾಗಲಿದೆ.
ಹೊಸ ಆದಾಯ ತೆರಿಗೆ ವ್ಯವಸ್ಥೆಯ ಪ್ರಕಾರ, 24 ಲಕ್ಷ ರೂ. ಆದಾಯ ಇದ್ದರೆ 1.10 ಲಕ್ಷ ರೂ. ತೆರಿಗೆ ಉಳಿತಾಯವಾಗಲಿದೆ. 50 ಲಕ್ಷ ರೂ. ಆದಾಯ ಇದ್ದರೆ 1.10 ಲಕ್ಷ ರೂ. ತೆರಿಗೆ ಉಳಿತಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ತಿಳಿಸಿದ್ದಾರೆ.