newsics.com
ಬೆಂಗಳೂರು : ಬಿಗ್ ಬಾಸ್ ಸೀಸನ್ ೧೧ರಲ್ಲೂ ಒಂದು ಪ್ರೇಮಕಥೆ ಶುರುವಾಗಿದೆ. ಅದು ಬೇರಾರೂ ಅಲ್ಲ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಲವ್ ಸ್ಟೋರಿ.. ಈ ಜೋಡಿ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.
ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯ ಅವರ ಒಡನಾಟ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು.. ಹೊರಗಡೆ ಅವರಿಬ್ಬರ ಪ್ಯಾನ್ ಪೇಜ್‌ಗಳು ಕ್ರಿಯೆಟ್ ಆಗಿವೆ.. ಇದೀಗ ಅವರಿಬ್ಬರು ಹೊರಬಂದ ಮೇಲೂ ಹೀಗೆ ಇರುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.. ಈ ಡೌಟ್‌ನ್ನು ಸ್ವತಃ ತ್ರಿವಿಕ್ರಮ್ ಕ್ಲಿಯರ್ ಮಾಡಿದ್ದಾರೆ.
ಹನುಮಂತ ವಿನ್ನರ್ ಆದರೇ ತ್ರಿವಿಕ್ರಮ್ ರನ್ನರ್‌ಅಪ್ ಆದರು.. ಸದ್ಯ ಅಪಾರ ಮೆಚ್ಚುಗೆ ಪಡೆದು ಹೊರಬಂದಿರುವ ತ್ರಿವಿಕ್ರಮ್ ಮಾತನಾಡಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.
ತ್ರಿವಿಕ್ರಮ್ ನಾನು ಭವ್ಯ ಅವರನ್ನು ಮದುವೆ ಆಗೋದಿಲ್ಲ.. ಅವರು ನನಗಿಂತ ತುಂಬಾ ಚಿಕ್ಕವರು ಎಂದು ನೇರವಾಗಿ ಉತ್ತರ ನೀಡಿದ್ದಾರೆ.. ಇದರಿಂದ ಹರಡಿದ್ದ ಅವರಿಬ್ಬರ ಮದುವೆ ವದಂತಿಗಳಿಗೆ ಬ್ರೇಕ್ ಬಿದ್ದಂತಾಗಿದೆ.