newsics.com
ಬೆಂಗಳೂರು : ಬಿಗ್ ಬಾಸ್ ಸೀಸನ್ 11 ವಿನ್ನರ್ ಹನುಮಂತು ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಬಿಗ್ ಬಾಸ್ ವೀಕ್ಷಕರ 5 ಕೋಟಿ ವೋಟ್ ಪಡೆದ ಹನುಮಂತು ಅವರನ್ನ ಕನ್ನಡಿಗರು ತುಂಬು ಹೃದಯದಿಂದ ಹಾರೈಸಿದ್ದಾರೆ.
ಹನುಮಂತು ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವ ಮೊದಲೇ 2 ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಜೀ ಕನ್ನಡ ವಾಹಿನಿಯ ಸರಿಗಮಪ, ಭರ್ಜರಿ ಬ್ಯಾಚುಲರ್ಸ್ನಲ್ಲಿ ಹನುಮಂತು ಕನ್ನಡಿಗರ ಕಣ್ಣು ಅರಳುವಂತೆ ಮಾಡಿದ್ದರು.
ಬಿಗ್ ಬಾಸ್ ಫಿನಾಲೆಯಲ್ಲಿ ಹನುಮಂತ ಗೆದ್ದ ಬಳಿಕ ಜೀ ಕನ್ನಡ ವಾಹಿನಿ ಹಳ್ಳಿ ಹೈದನಿಗೆ ವಿಶೇಷ ಅಭಿನಂದನೆ ತಿಳಿಸಿದೆ.
ಪ್ರೀತಿಯ ಹನುಮಂತ, ನಮ್ಮ ಸರಿಗಮಪ ವೇದಿಕೆಗೆ ಈ ಅದಮ್ಯ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ! ನಿಮ್ಮ ಗೆಲುವಿಗೆ ನಮ್ಮ ಅಭಿನಂದನೆಗಳು.