newsics.com
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ರಜತ್ ಕಿಶನ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಉಳಿದ ಸ್ಪರ್ಧಿಗಳಾದ ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಮತ್ತು ಮಂಜು ಪೈಕಿ ಯಾರು 50 ಲಕ್ಷ ರೂಪಾಯಿಗಳ ಬಹುಮಾನವನ್ನು ಗೆಲ್ಲಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಮಿಕ್ಕ ಮೂವರಲ್ಲಿ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಬರುವವರ್ಯಾರು? ಎಂಬುದು ಕೂತೂಹಲ ಹೆಚ್ಚಿಸಿದೆ. ಇಂದಿನ ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯಿಂದ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ ಅವರು ಔಟ್ ಆಗಿ ಹೊರ ಬಂದಿದ್ದಾರೆಂದು ವರದಿಯಾಗುತ್ತಿದೆ.
ರಜತ್ ಅವರು 50 ಲಕ್ಷ ರೇಸ್ ನಿಂದ ಹೊರ ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿಡಾಡುತ್ತಿದೆ. ಇದಕ್ಕೆಲ್ಲ ಸ್ಪಷ್ಟನೆ ಇಂದು ಸಂಜೆ 6 ಗಂಟೆಗೆ ಆರಂಭವಾಗುವ ಬಿಗ್‌ಬಾಸ್ ಫಿನಾಲೆ ಕಾರ್ಯಕ್ರಮದಲ್ಲಿ ತಿಳಿದು ಬರಲಿದೆ.