newsics.com
ಸಿದ್ದಾಪುರ(ಉತ್ತರ ಕನ್ನಡ): ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿ ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನವಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇಮಗಾರದಲ್ಲಿ ಈ ದುರಂತ ನಡೆದಿದೆ.
ಮನೆಯಲ್ಲಿದ್ದ ವೈರ್‌ಗೆ ಶಾರ್ಟ್ ಸರ್ಕ್ಯೂರ್ಟ್‌ನಿಂದಾಗಿ ಕಿಡಿ ಹೊತ್ತಿದ್ದು, ಕೊಟ್ಟಿಗೆಯ ಅಟ್ಟದ ಮೇಲಿರುವ ಹುಲ್ಲಿಗೆ ಈ ಕಿಡಿ ತಾಗಿ ಬೆಂಕಿ ಹೊತ್ತಿದೆ. ಹುಲ್ಲಿಗೆ ಬಿದ್ದ ಬೆಂಕಿ ಆವರಿಸಿ ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನವಾಗಿವೆ.
ಹೇಮಗಾರಿನ ಮಹೇಶ್ ಹೆಗಡೆ ಎಂಬುವರ ಮನೆಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಸಂಜೆ ವೇಳೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Rain alert Karnataka : ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
Actor Darshan ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಿ ವಶಕ್ಕೆ ಪಡೆಯಲು ಮುಂದಾದ ಪೊಲೀಸರು