newsics.com
ಗದಗ: ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರಿ ಇಲಾಖೆಗಳ ವರದಿಗಳು ಹೇಳುತ್ತಿವೆ. ಹೌದು, ಈ ನದಿ ನೀರು ಕುಡಿಯಲು ಯೋಗ್ಯನೇ ಇಲ್ಲ ಎಂದು ಎರಡು ವರದಿಗಳಲ್ಲಿ ಬಹಿರಂಗವಾಗಿದೆ.
ಹೀಗಾಗಿ ನೀರು ಕುಡಿಯದಂತೆ ಜಿಲ್ಲಾಡಳಿತ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ತುಂಗಭದ್ರೆಯ ಒಡಲು ಕಲುಷಿತ ಆಗಲು ಕಾರಣ ಅದೊಂದು ಸಕ್ಕರೆ ಕಾರ್ಖಾನೆ ಎನ್ನುವ ದಟ್ಟ ಅನುಮಾನ ರೈತರಲ್ಲಿ ಮೂಡಿದೆ. ಹೀಗಾಗಿ ಆ ಸಕ್ಕರೆ ಕಾರ್ಖನೆಯ ಹರಿದು ಹೋಗುವ ನೀರು ಕೂಡ ತಪಾಸಣೆಗೆ ಕಳಿಸಲಾಗಿದೆ. ಇನ್ನೂ ನದಿ ತೀರದ ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಬೆಳ್ಳಗೆ ಹಾಲಿನಂತೆ ಹರಿಯುತ್ತಿದ್ದ ತುಂಗಭದ್ರೆ ಈಗ ಸಂಪೂರ್ಣ ಹಸಿರು ಬಣಕ್ಕೆ ತಿರುಗಿ ಹರಿಯುತ್ತಿದ್ದಾಳೆ. ಕಳೆದ 15 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ನೋಡಿ ನದಿ ತೀರದ ಜನರು ಕಂಗಾಲಾಗಿದ್ದಾರೆ. ಈ ನೀರು ಕುಡಿದ ಜನರು ಹೊಟ್ಟೆ ನೋವು, ವಾಂತಿ, ಜ್ವರದಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲ, ಹೊಲ, ಗದ್ದೆಗಳು, ಕುಡಿಯವ ನೀರಿನ ಟ್ಯಾಂಕ್ ಗಳ ಪೈಪ್ ಗಳಲ್ಲೂ ಹಸಿರು ಬಣ್ಣದ ನೀರು ನೋಡಿ ಬೆಚ್ಚಿ ಹೋಗಿದ್ದಾರೆ. ಇಂಥ ನೀರು ನಾವೂ ಎಂದಿಗೂ ನೋಡಿಲ್ಲ. ಇದೆಂಥಾ ನೀರು ಅಂತಿದ್ದಾರೆ. ಇದೇ ನೀರು ಹತ್ತಾರು ಹಳ್ಳಿಗೆ ಪೂರೈಕೆ ಆಗಿದೆ.