newsics.com
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.
ಸದ್ಯ ಟ್ರೆಂಡಿಂಗ್‌ನಲ್ಲಿರುವ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಕಳೆದ ಎರಡು-ಮೂರು ದಿನಗಳಿಂದ ಮಹಾ ಕುಂಭಮೇಳದಲ್ಲಿ ಮಣಿಗಳ ಸರ ಮಾರುವ ಹುಡುಗಿಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಆಕೆಯ ಆಕರ್ಷಕ ಕಣ್ಣುಗಳು ಎಂತಹವರನ್ನಾದರೂ ಸೆಳೆಯುವಂತಿವೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಹರ್ಷಾ ರಿಚಾರಿಯಾ ಕುರಿತು ತಿಳಿದುಕೊಳ್ಳಲು ಗೂಗಲ್ ಮಾಡಿದವರ ಸಂಖ್ಯೆಯೂ ಕೆಲವೇ ಗಂಟೆಗಳಲ್ಲಿ ದುಪ್ಪಟ್ಟು ಆಗಿತ್ತು.
ಈ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ಮತ್ತೊಂದು ವಿಡಿಯೋ. ಫೇಸ್ಬುಕ್, ಟ್ವಿಟರ್ (ಪ್ರಸ್ತುತ ಎಕ್ಸ್,), ಇನ್ಸ್ಟಾಗ್ರಾಂ.. ಹೀಗೆ ಯಾವುದೇ ಸಾಮಾಜಿಕ ಪುಟಗಳನ್ನು ತೆರೆದರೂ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಸರ ಮಾರುವ ಯುವತಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟು ಅಟ್ರಾಕ್ಷನ್ ಆಗಲು ಪ್ರಮುಖ ಕಾರಣ ಆಕರ್ಷಕ ಕಣ್ಣುಗಳು.
https://www.instagram.com/reel/DE7evgYh3Dz/?igsh=aWlsaGc1MDVyNzB6
ಹೌದು, ರುದ್ರಾಕ್ಷಿ ಮಾರುತ್ತಿರುವ ಯುವತಿಯ ಹೆಸರು ಮೊನಾಲಿಸಾ ಎಂದು ಆಕೆಯೇ ಹೇಳಿದ್ದಾಳಾದರೂ ವಾಸ್ತವವಾಗಿ ಆಕೆಯ ನಿಜವಾದ ಹೆಸರು ಅದಲ್ಲ ಎನ್ನಲಾಗುತ್ತಿದೆ. ಮಧ್ಯಪ್ರದೇಶದ ಇಂದೋರ್ ಮೂಲದ ಈ ಯುವತಿಯ ಕಣ್ಣೋಟಕ್ಕೆ ಮಾರುಹೋದ ಅನೇಕರು ಆಕೆಯ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಕುಂಭಮೇಳಕ್ಕೆ ಬಂದಿರುವ ಈಕೆಯನ್ನು ಹಾಲಿವುಡ್ ನಟಿ ಏಂಜೆಲಿನಾ ಜೋಲಿಗೆ ಹೋಲಿಸಿದ್ದಾರೆ. ಅಲ್ಲದೆ, ಕ್ರಷ್ ಆಫ್ ಇಂಡಿಯಾ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಮುದ್ದು ಮತ್ತು ಮುಗ್ಧ ಯುವತಿ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದುಕೊಳ್ಳುತ್ತಿವೆ.
Fire disaster at Kumbh Mela ಕುಂಭ ಮೇಳದಲ್ಲಿ ಅಗ್ನಿ ಅವಘಡ: ಡೇರೆಗಳು ನಾಶ