newsics.com
ಹೈದ್ರಾಬಾದ್ : ಹೀನಾಯವಾಗಿ ಸೋತ ಸಿನಿಮಾವನ್ನು ಅನಧಿಕೃತವಾಗಿ ಕೇಬಲ್ ಟಿವಿಯಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
ನಟ ರಾಮ್ ಚರಣ್ ಅವರಿಗೆ 2025ರ ಆರಂಭದಲ್ಲೇ ಸೋಲು ಉಂಟಾಗಿದೆ. ಈ ವರ್ಷ ಸಂಕ್ರಾಂತಿ ಪ್ರಯುಕ್ತ ಅವರು ನಟಿಸಿದ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಯಿತು. ಆದರೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಸಿನಿಮಾದ ಸೋಲಿಗೆ ಪೈರಸಿ ಕೂಡ ಕಾರಣ ಆಗಿದೆ.
ಟಾಲಿವುಡ್ ನಟ ರಾಮ್ ಚರಣ್ ಅವರು ನಟಿಸಿದ ‘ಗೇಮ್ ಚೇಂಜರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಗೇಮ್’ ಚೇಂಜರ್’ ಸಿನಿಮಾಗೆ ಮೊದಲ ದಿನವೇ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತು. ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದರೂ ಕೂಡ ಜನರಿಗೆ ಇಷ್ಟ ಆಗಲಿಲ್ಲ. ಕಥೆಯಲ್ಲಿ ಲಾಜಿಕ್ ಇಲ್ಲ ಎಂಬ ಕಾರಣಕ್ಕೆ ಟ್ರೋಲ್ ಮಾಡಲಾಯಿತು. ದಿನದಿಂದ ದಿನಕ್ಕೆ ‘ಗೇಮ್ ಚೇಂಜರ್’ ಕಲೆಕ್ಷನ್ ಕುಗ್ಗುತ್ತಲೇ ಹೋಯಿತು. ಇದೇ ಅವಕಾಶವನ್ನು ಬಳಸಿಕೊಂಡು ಕೆಲವರು ಪೈರಸಿ ಮಾಡಿದರು.
‘ಎಪಿ ಲೋಕಲ್ ಟಿವಿ’ ವಾಹಿನಿಯಲ್ಲಿ ‘ಗೇಮ್ ಚೇಂಜರ್’ ಸಿನಿಮಾದ ಪೈರಸಿ ಕಾಪಿ ಪ್ರಸಾರ ಮಾಡಲಾಗಿದೆ. ಕೂಡಲೇ ಚಿತ್ರತಂಡದವರು ಪೊಲೀಸರ ಗಮನಕ್ಕೆ ತಂದರು. ದೂರು ಆಧರಿಸಿ ‘ಎಪಿ ಲೋಕಲ್ ಟಿವಿ’ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಪೈರಸಿಗೆ ಬಳಸಿದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಫ್ಲಾಪ್ ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡಿದವರು ಈಗ ಕಂಬಿ ಎಣಿಸುವಂತಾಗಿದೆ.