newsics.com
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ, ಜೂನ್ 16 ರಂದು ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ ಮಂಧಾನ ಹೊಸ ಮೈಲಿಗಲ್ಲಿ ಸಾಧಿಸಿದ್ದಾರೆ.
ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ ಶತಕ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈವರೆಗೂ ಸ್ಮೃತಿ ಆಡಿರುವ ಎಲ್ಲಾ ಸ್ವರೂಪದ ಪಂದ್ಯಗಳಲ್ಲಿಯೂ 7000ಕ್ಕೂ ಹೆಚ್ಚು ರನ್ ಕಲೆಹಾಕಿರುವ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ.
https://www.instagram.com/p/C8Te9PBy7rK/?utm_source=ig_web_copy_link&igsh=MzRlODBiNWFlZA==
ಈ ಸಾಧನೆಯ ಮೂಲಕ ಸ್ಮೃತಿ ಮಂಧಾನ ಗಣ್ಯ ಮಹಿಳಾ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ. ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಅತೀ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಮಂಧಾನ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಮುಂಚೆ 10868 ರನ್ ಗಳಿಸುವ ಮೂಲಕ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮೊದಲ ಸ್ಥಾನ ಪಡೆದಿದ್ದರು. ಇದೀಗ 7000 ರನ್ ಕಲೆಹಾಕುವ ಮೂಲಕ ಸ್ಮೃತಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 6880 ರನ್ ಕಲೆಹಾಕಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ರೆಕಾರ್ಡ್ ಬ್ರೇಕ್ ಮಾಡುವ ಗಡಿಯಲ್ಲಿದ್ದಾರೆ.
ಬಾಂಗ್ಲಾದೇಶದ ವಿಕೆಟ್ ಪತನ: ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದ ನೇಪಾಳಿ ಅಭಿಮಾನಿ!
ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್‌ನಿಂದ ಪಾಕ್ ನಿರ್ಗಮನ