newsics.com
ಬೆಳಗಾವಿ; ಅಂಗನವಾಡಿಗೆ ನುಗ್ಗಿ ಶಿಕ್ಷಕೀಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಹೌದು ಅಂಗನವಾಡಿಯಲ್ಲಿ ಅಡುಗೆ ಮಾಡುವ ಮಹಿಳಾ ಸಹಾಯಕಿಯ ಗಂಡನೊಬ್ಬ ಶಿಕ್ಷಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಂಗನವಾಡಿ ಕೇಂದ್ರದಲ್ಲಿರುವ ಅಡುಗೆ ಸಿಬ್ಬಂದಿಗೆ ಶೌಚಾಲಯ ಸ್ವಚ್ಛ ಮಾಡುವಂತೆ ಅಡುಗೆ ಮಾಡುವ ಮಹಿಳೆಗೆ ಶಿಕ್ಷಕಿ ಹೇಳಿದ್ದಾರೆ. ಈ ವಿಚಾರವನ್ನ ತನ್ನ ಗಂಡನಿಗೆ ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ಹೋಗಿ ಹೇಳಿದ್ದಾರೆ.
ಇದರಿಂದ ಕೋಪಗೊಂಡು ಅಂಗನವಾಡಿಗೆ ಆಗಮಿಸಿದ್ದ ಆರೋಪಿ ಸಿದ್ರಾಯಿ ಕರ್ಲಟ್ಟಿ, ತನ್ನ ಹೆಂಡತಿಗೆ ಶೌಚಾಲಯ ಕ್ಲಿನ್ ಮಾಡಲು ಹಚ್ಚುತ್ತಿಯಾ ಅಂತಾ ಅವಾಚ್ಯವಾಗಿ ನಿಂದಿಸಿದ್ದಾರೆ. ಇದೇ ವೇಳೆ ಶಿಕ್ಷಕಿ ಸೀರೆ ಎಳೆದು ಮಾನಭಂಗ ಪಡಿಸಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಇನ್ನು ಶಿಕ್ಷಕಿ ಬ್ರೈನ್ ಟ್ಯೂಮರ್ದಿಂದ ಬಳಲುತ್ತಿದ್ದು, ಮಾನಸಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆನಡೆಸುತ್ತಿದ್ದಾರೆ.