newsics.com
ಮಾತನ್ನೇ ಬಂಡವಾಳವಾಗಿಸಿಕೊಂಡಿದ್ದ ಫೈರ್ ಬ್ರ್ಯಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಕನ್ನಡ 11 ರಿಯಾಲಿಟಿ ಶೋ ಫೈನಲ್‌ಗೆ ಕೇವಲ ಎರಡು ವಾರ ಬಾಕಿಬಿರುವಾಗ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ.
ಈಗ ಬಿಗ್ ಬಾಸ್ ಮನೆಯಲ್ಲಿ ಈಗ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಎಂಟು ಮಂದಿ ಮಾತ್ರ ಉಳಿದಿದ್ದಾರೆ. ಫಿನಾಲೆಗೆ ಮೊದಲ ಸ್ಪರ್ಧಿಯಾಗಿ ಹನುಮಂತು ಪ್ರವೇಶ ಪಡೆದಿದ್ದಾರೆ. ಈ ಮೂಲಕ ಮನೆಯ ಅಲ್ಟಿಮೇಟ್ ಕ್ಯಾಪ್ಟನ್ ಆಗಿದ್ದಾರೆ. ಹನುಮಂತು ಫಿನಾಲೆವರೆಗೂ ಯಾವುದೇ ಟೆನ್ಷನ್ ಇಲ್ಲದೆ ಹಾಯಾಗಿ ಮನೆಯಲ್ಲಿರಬಹುದು. ಅಲ್ಲದೆ ಈ ವಾರ ಕಿಚ್ಚನ ಚಪ್ಪಾಳೆಯೂ ಹನುಮಂತು ಅವರಿಗೆ ಸಿಕ್ಕಿದೆ.
ಆದರೆ ಉಳಿದ ಸ್ಪರ್ಧಿಗಳಿಗೆ ತಲೆನೋವು ಶುರುವಾಗಿದೆ. ಅದರಲ್ಲೂ ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಈ ವಾರ ಹೇಗಾದರೂ ಮಾಡಿ ಉಳಿಯಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದಾರೆ.
ನಾಮಿನೇಟ್ ಆಗಿರುವವರ ಅಳಿವು – ಉಳಿವು ವೀಕ್ಷಕರ ಕೈಯಲ್ಲಿದೆ. ವೀಕ್ಷಕರು ಹೆಚ್ಚು ವೋಟ್ ಮಾಡಿ ಭವ್ಯಾ ಅವರನ್ನು ಸೇಫ್ ಮಾಡಿದ್ದಾರೆ. ಧನರಾಜ್, ಮೋಕ್ಷಿತಾ, ತಿವಿಕ್ರಮ್, ಮಂಜು ಎಲ್ಲರೂ ಸೇಫ್ ಆಗಿದ್ದಾರೆ.
ಇವತ್ತಿನ ಎಪಿಸೋಡ್‌ನಲ್ಲಿ ಮೊದಲಿಗೆ ತ್ರಿವಿಕ್ರಮ್ ಅವರು ಸೇವ್ ಆಗ್ತಾರೆ. ಇವರಾದ ಬಳಿಕ ಧನ್‌ರಾಜ್ ಅವರು ಸೇವ್ ಆಗ್ತಾರೆ. ಕೊನೆಗೆ ಉಳಿದುಕೊಳ್ಳುವುದು ಚೈತ್ರಾ ಮತ್ತು ಮೋಕ್ಷಿತಾ ಅವರು ಮಾತ್ರ. ಇವರಿಬ್ಬರೂ ಕಠಿಣ ಸ್ಪರ್ಧಿಗಳೇ. ಪ್ರತೀ ವಾರ ನಾಮಿನೇಟ್ ಆದಾಗ ಇವರಿಬ್ಬರ ಹೆಸರು ಇದ್ದೇ ಇರುತ್ತಿತ್ತು. ಅಂತಿಮವಾಗಿ ಮೋಕ್ಷಿತಾ ಸೇವ್ ಆಗಿದ್ದು, ಚೈತ್ರಾ ದೊಡ್ಮನೆಯಿಂದ ಹೊರಬಂದಿದ್ದಾರೆ.

Relationship ಹೆಣ್ಣಿನ ಈ ಅಂಶಗಳೇ ಪುರುಷನನ್ನು ಹೆಚ್ಚು ಆಕರ್ಷಿಸುತ್ತವೆ